ಮೆಲ್ಬೊರ್ನ್: ಆಸ್ಟ್ರೇಲಿಯಾ ನೆಲಕ್ಕೆ ಕಾಲಿಟ್ಟರೆ ಸದಾ ಟೀಂ ಇಂಡಿಯಾ ಕ್ರಿಕೆಟಿಗರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕುಗ್ಗಿಸುವ ಕೆಲಸ ಮಾಡಲಾಗುತ್ತದೆ. ಇದೀಗ ಭಾರತ ತಂಡದ ಅಭ್ಯಾಸಕ್ಕೆ ನೀಡಿದ ಪಿಚ್ ಕೂಡಾ ವಿವಾದಕ್ಕೆ ಕಾರಣವಾಗಿದೆ.
ಡಿಸೆಂಬರ್ 26 ರಿಂದ ಮೆಲ್ಬೊರ್ನ್ ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ಅತ್ತ ಆಸ್ಟ್ರೇಲಿಯಾವೂ ಅಭ್ಯಾಸ ನಡೆಸುತ್ತಿದೆ. ಆದರೆ ಉಭಯ ತಂಡದ ಅಭ್ಯಾಸಕ್ಕೆ ನೀಡಿದ ಪಿಚ್ ಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪೈಕಿ ಭಾರತಕ್ಕೆ ಕಿತ್ತೋದ ಪಿಚ್ ಕೊಟ್ಟರೆ ಆಸ್ಟ್ರೇಲಿಯಾಕ್ಕೆ ಉತ್ತಮ ದರ್ಜೆಯ ಪಿಚ್ ನೀಡಲಾಗಿದೆ. ಇದರ ಬಗ್ಗೆ ಟೀಂ ಇಂಡಿಯಾ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಒಂದು ತಂಡವನ್ನು ಯಾವ ರೀತಿ ಕುಗ್ಗಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ.
ಭಾರತಕ್ಕೆ ನೀಡಲಾಗಿರುವ ಅಭ್ಯಾಸದ ಪಿಚ್ ನಲ್ಲಿ ಅಲ್ಲಲ್ಲಿ ಕಿತ್ತೋಗಿರುವ ಮಾರ್ಕ್ ಇದೆ. ಆದರೆ ಆಸ್ಟ್ರೇಲಿಯಾಕ್ಕೆ ಮಾತ್ರ ಅತ್ಯುತ್ತಮ ದರ್ಜೆಯ ಪಿಚ್ ನೀಡಿರುವುದನ್ನು ಗಮನಿಸಬಹುದಾಗಿದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಆಸ್ಟ್ರೇಲಿಯಾಕ್ಕೂ ಮುಖ್ಯವಾಗಿದೆ. ಈ ಕಾರಣಕ್ಕೆ ಟೀಂ ಇಂಡಿಯಾಕ್ಕೆ ಈ ರೀತಿ ಕಾಟ ಕೊಡುತ್ತಿದ್ದಾರೆ ಎಂದು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.