ಮೆಲ್ಬೊರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಗ ಬೇರೆ ಬೇರೆ ಕಾರಣಕ್ಕೆ ಆಸ್ಟ್ರೇಲಿಯಾ ಮಾಧ್ಯಮಗಳ ಟಾರ್ಗೆಟ್ ಆಗಿವೆ.
ರವೀಂದ್ರ ಜಡೇಜಾ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಹಿಂದಿಯಲ್ಲಿ ಮಾತನಾಡಿದ ವಿಚಾರಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ ಮಾಧ್ಯಮಗಳ ಆರೋಪವನ್ನು ಭಾರತೀಯ ಮಾಧ್ಯಮ ವ್ಯವಸ್ಥಾಪಕರು ನಿರಾಕರಿಸಿದ್ದಾರೆ.
ಜಡೇಜಾ ಕತೆ ಹೀಗಾದರೆ ಕೊಹ್ಲಿ ಮೇಲೂ ಆಸ್ಟ್ರೇಲಿಯಾ ಮಾಧ್ಯಮಗಳು ಕೆಂಡ ಕಾರುತ್ತಿವೆ. ಇದಕ್ಕೆ ಕಾರಣ ಆಸೀಸ್ ಮಾಧ್ಯಮಗಳೊಂದಿಗೆ ಮೊನ್ನೆಯಷ್ಟೇ ಏರ್ ಪೋರ್ಟ್ ನಲ್ಲಿ ಮಾತಿನ ಚಕಮಕಿ ನಡೆಸಿದ್ದರು. ತಮ್ಮ ಮಕ್ಕಳ ವಿಡಿಯೋ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಕೊಹ್ಲಿ ಕ್ಲಾಸ್ ತೆಗೆದುಕೊಂಡಿದ್ದರು.
ಈ ಕಾರಣಕ್ಕೆ ಕೊಹ್ಲಿ ಕೂಡಾ ಆಸೀಸ್ ಮಾಧ್ಯಮಗಳ ಟಾರ್ಗೆಟ್ ಆಗಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳ ಬಗ್ಗೆ ವರದಿ ಮಾಡುವುದು ನಮ್ಮ ಕ್ರಮ. ಅದೇ ರೀತಿ ಕೊಹ್ಲಿಯನ್ನೂ ಮಾಡಿದ್ದೆವು. ಇದಕ್ಕೆ ಇಷ್ಟೊಂದು ಉಗ್ರವಾಗಿ ಪ್ರತಿಕ್ರಿಯಿಸುವ ಅಗತ್ಯವೇ ಇರಲಿಲ್ಲ ಎಂದು ಆಸೀಸ್ ಮಾಧ್ಯಮಗಳು ಕೆಂಡಕಾರುತ್ತಿವೆ.