Select Your Language

Notifications

webdunia
webdunia
webdunia
webdunia

ಪತ್ನಿ, ಮಕ್ಕಳ ಸಮೇತ ಭಾರತ ತೊರೆಯಲು ನಿರ್ಧರಿಸಿದ ವಿರಾಟ್ ಕೊಹ್ಲಿ

Virat Kohli-Anushka Sharma

Krishnaveni K

ಮುಂಬೈ , ಗುರುವಾರ, 19 ಡಿಸೆಂಬರ್ 2024 (16:06 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯದಲ್ಲೇ ತಮ್ಮ ಪತ್ನಿ, ಮಕ್ಕಳ ಸಮೇತ ಭಾರತ ತೊರೆಯಿದ್ದಾರಂತೆ. ಈ ವಿಚಾರ ಹೇಳಿದ್ದು ಬೇರೆ ಯಾರೋ ಅಲ್ಲ. ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ.

ಅನುಷ್ಕಾ ತಮ್ಮ ಎರಡನೇ ಮಗುವಿಗೆ ಜನ್ಮನೀಡಿದ್ದು ಲಂಡನ್ ನಲ್ಲಿ. ಮಗ ಅಕಾಯ್ ಜನಿಸಿದ ಮೇಲೆ ಬಹುತೇಕ ಕೊಹ್ಲಿ ತಮ್ಮ ಕುಟುಂಬ ಸಮೇತ ಲಂಡನ್ ನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಕೇವಲ ಕ್ರಿಕೆಟ್ ಸರಣಿಯಿದ್ದರೆ ಮಾತ್ರ ಭಾರತಕ್ಕೆ ಬರುತ್ತಿದ್ದಾರೆ.

ಹೀಗಾಗಿ ಕೊಹ್ಲಿ ಇನ್ಮುಂದೆ ಲಂಡನ್ ನಲ್ಲಿಯೇ ಇರಲಿದ್ದಾರೆ ಎಂದು ವದಂತಿಗಳಿತ್ತು. ಆದರೆ ಇದೀಗ ಅವರ ಬಾಲ್ಯದ ಕೋಚ್ ಈ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ರಾಜ್ ಕುಮಾರ್ ಶರ್ಮಾ ‘ವಿರಾಟ್ ತನ್ನ ಪತ್ನಿ, ಮಕ್ಕಳ ಸಮೇತ ಸದ್ಯದಲ್ಲಿಯೇ ಲಂಡನ್ ಗೆ ಶಿಫ್ಟ್ ಆಗಲಿದ್ದಾರೆ. ಸದ್ಯದಲ್ಲೇ ಅವರು ಭಾರತ ತೊರೆದು ಲಂಡನ್ ನಲ್ಲಿ ಸೆಟಲ್ ಆಗಲಿದ್ದಾರೆ’ ಎಂದಿದ್ದಾರೆ.

ವಿರಾಟ್ ಕೊಹ್ಲಿ ಈಗ ತಮ್ಮ ವೃತ್ತಿ ಬದುಕಿನ ಅಂತಿಮ ಚರಣದಲ್ಲಿದ್ದಾರೆ. ಹೀಗಾಗಿ ನಿವೃತ್ತಿ ಬಳಿಕ ಕೊಹ್ಲಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಭಾರತ ತೊರೆಯಲಿದ್ದಾರೆ ಎನ್ನುವ ಸುದ್ದಿ ಬಹುತೇಕ ಖಚಿತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂಡದೊಳಗೇ ಪಾಲಿಟಿಕ್ಸ್, ಮಗನ ವಿರುದ್ಧ ಪಿತೂರಿ: ರವಿಚಂದ್ರನ್ ಅಶ್ವಿನ್ ತಂದೆ ಶಾಕಿಂಗ್ ಆರೋಪಗಳು