ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮೊದಲು ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಆದರೆ ಇದು ಒಳ್ಳೆಯದೇ ಆಯ್ತು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ರೋಹಿತ್ ಶರ್ಮಾ ನಿನ್ನೆ ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ನಾಲ್ಕನೇ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಖಚಿತವಾಗಿಲ್ಲ. ನಾಯಕ ರೋಹಿತ್ ಗಾಯಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಒಂದು ಗುಂಪು ಒಳ್ಳೆಯದೇ ಆಯ್ತು ಎಂದು ಕಾಮೆಂಟ್ ಮಾಡುತ್ತಿದೆ.
ಇದಕ್ಕೆ ಕಾರಣವೂ ಇದೆ. ರೋಹಿತ್ ಈಗ ಮೊದಲಿನ ಫಾರ್ಮ್ ನಲ್ಲಿಲ್ಲ. ಮೊದಲ ಪಂದ್ಯದಲ್ಲಿ ಅವರು ಇಲ್ಲದೇ ತಂಡ ಟೆಸ್ಟ್ ಪಂದ್ಯವಾಡಿ ಅದ್ಭುತ ಪ್ರದರ್ಶನ ನೀಡಿತ್ತು. ಬುಮ್ರಾ ನಾಯಕತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದರೆ ರೋಹಿತ್ ಎರಡನೇ ಟೆಸ್ಟ್ ನಿಂದ ತಂಡಕ್ಕೆ ಬಂದಾಗಿನಿಂದ ತಂಡದ ಪ್ರದರ್ಶನ ಮತ್ತೆ ಪೇಲವವಾಗಿದೆ. ಬ್ಯಾಟಿಂಗ್ ಮಾತ್ರವಲ್ಲ, ರೋಹಿತ್ ನಾಯಕತ್ವ ಕೂಡಾ ಟೀಕೆಗೊಳಗಾಗಿದೆ. ಹೀಗಾಗಿ ಕೆಲವು ಅಭಿಮಾನಿಗಳು ರೋಹಿತ್ ಇಲ್ಲದಿದ್ದರೇ ಒಳ್ಳೆಯದು. ಅದು ನಿಜಕ್ಕೂ ಗುಡ್ ನ್ಯೂಸ್. ಬುಮ್ರಾನೇ ನಾಯಕನಾಗಲಿ. ತಂಡ ಗೆಲ್ಲಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.