Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾಗಿರುವ ಅಡ್ಡ ಹೆಸರು ಬಹಿರಂಗಪಡಿಸಿದ ಮಾಜಿ ಫೀಲ್ಡಿಂಗ್ ಕೋಚ್

webdunia
ಸೋಮವಾರ, 29 ನವೆಂಬರ್ 2021 (09:30 IST)
ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾರ ಫೀಲ್ಡಿಂಗ್ ಸಾಮರ್ಥ್ಯ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಅವರನ್ನು ಈ ವಿಚಾರಕ್ಕೆ ಯಾವ ರೀತಿ ಕರೆಯುತ್ತಾರೆ ಎಂಬ  ವಿಚಾರವನ್ನು ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಬಹಿರಂಗಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಲಿಪ್ ನ ಅತ್ಯುತ್ತಮ ಫೀಲ್ಡರ್ ಗಳು. ಅದರಲ್ಲಿ ಕೊಹ್ಲಿ ಅತ್ಯಂತ ಫಿಟ್ ಆಟಗಾರ. ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ರೋಹಿತ್ ಕೂಡಾ ಅತ್ಯುತ್ತಮ ಫೀಲ್ಡರ್. ಆದರೆ ಅವರು ಕ್ಯಾಚಿಂಗ್ ಪ್ರಾಕ್ಟೀಸ್ ಗೆ ಹೆಚ್ಚು ಆಸಕ್ತಿ ತೋರಿಸಲ್ಲ.

ಪ್ರಾಕ್ಟೀಸ್ ವೇಳೆ ಹೆಚ್ಚೆಂದರೆ 65-70 ಕ್ಯಾಚ್ ಪ್ರಾಕ್ಟೀಸ್ ಮಾಡುತ್ತಾರಷ್ಟೇ. ಹಾಗಿದ್ದರೂ ಅವರು ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಇದಕ್ಕಾಗಿಯೇ ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರೂ ‘ಸ್ಟಿಕ್ಕೀ ಹ್ಯಾಂಡ್’ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆಟಗಾರರ ಅಂತಿಮ ಪಟ್ಟಿ ರಿಲೀಸ್ ಮಾಡಲು ಐಪಿಎಲ್ ಫ್ರಾಂಚೈಸಿಗೆ ಗಡುವು