Publish Date: Sun, 24 Dec 2023 (12:00 IST)
Updated Date: Sun, 24 Dec 2023 (12:00 IST)
ಮಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದ.ಆಫ್ರಿಕಾ ಟಿ20 ಸರಣಿ ವೇಳೆ ಪಾದ ಟ್ವಿಸ್ಟ್ ಆಗಿ ಗಾಯಗೊಂಡಿರುವುದು ಎಲ್ಲರಿಗೂ ಗೊತ್ತಿದೆ.
ಅವರೀಗ ತಮ್ಮ ಗಾಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ಕೊಟ್ಟಿದ್ದಾರೆ. ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವೊಂದನ್ನು ಸೂರ್ಯ ಪ್ರಕಟಿಸಿದ್ದಾರೆ.
ಗಾಯದ ಕಾರಣದಿಂದ ಸೂರ್ಯ ಇನ್ನು ಏಳು ವಾರ ಕ್ರಿಕೆಟ್ ನಿಂದ ದೂರವಿರಬೇಕು ಎಂದು ವರದಿಯಾದ ಬೆನ್ನಲ್ಲೇ ಅವರು ತಮ್ಮ ಗಾಯದ ಕುರಿತು ಮಾಹಿತಿ ನೀಡುವ ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸೂರ್ಯ ಪಾದಕ್ಕೆ ಬ್ಯಾಂಡೇಜ್ ಮಾಡಲಾಗಿದ್ದು, ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಸೂರ್ಯ ವಿಡಿಯೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿಗೂ ಸೂರ್ಯ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.