ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಟೆಸ್ಟ್ ನಾಯತ್ವ ತ್ಯಜಿಸಿದ ಮೇಲೆ ರೋಹಿತ್ ಶರ್ಮಾ ಟೀಂ ಇಂಡಿಯಾದ ಫುಲ್ ಟೈಂ ನಾಯಕರಾಗಿ ಆಯ್ಕೆಯಾದರು.
ಆದರೆ ಅವರು ಪೂರ್ಣಪ್ರಮಾಣದ ನಾಯಕರಾಗಲು ರೋಹಿತ್ ಮೊದಲು ಒಪ್ಪಿರಲಿಲ್ಲ. ಅವರಿಗೆ ನಾನೇ ಬಲವಂತ ಮಾಡಿ ಒಪ್ಪಿಸಿದ್ದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ರೋಹಿತ್ ಮೊದಲು ನಾಯಕತ್ವ ವಹಿಸಲು ಒಪ್ಪಲಿಲ್ಲ. ಆಗ ನೀವು ಒಪ್ಪದೇ ಇದ್ದರೆ ನಿಮ್ಮ ಹೆಸರನ್ನು ನಾನೇ ಬಹಿರಂಗವಾಗಿ ಘೋಷಿಸಬೇಕಾಗುತ್ತದೆ ಎಂದಿದ್ದೆ. ಮೂರೂ ಮಾದರಿಯ ನಾಯಕತ್ವ ವಹಿಸಿದರೆ ಒತ್ತಡ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ರೋಹಿತ್ ಗೆ ನಾಯಕರಾಗುವುದು ಇಷ್ಟವಿರಲಿಲ್ಲ. ಕೊನೆಗೆ ನನ್ನ ಬಲವಂತಕ್ಕೆ ಒಪ್ಪಿದರು. ಈಗ ಅವರು ತಾನೇ ಮುಂದೆ ನಿಂತು ತಂಡ ಮುನ್ನಡೆಸುತ್ತಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.