Publish Date: Thu, 09 Nov 2023 (17:24 IST)
Updated Date: Thu, 09 Nov 2023 (17:27 IST)
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ನಡೆಯುತ್ತಿರುವ ನ್ಯೂಜಿಲೆಂಡ್-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 46.4 ಓವರ್ ಗಳಲ್ಲಿ 171 ರನ್ ಗಳಿಸಿ ಆಲೌಟ್ ಆಗಿದೆ.
ಇಂದು ನ್ಯೂಜಿಲೆಂಡ್ ದಾಳಿಗೆ ತತ್ತರಿಸಿದ ಲಂಕಾ ಜುಜುಬಿ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ಕೊನೆಯ ವಿಕೆಟ್ ಗೆ ಮಧುಶಂಕ (19) ಮತ್ತು ಮಹೀಶ್ ತೀಕ್ಷ್ಣ (39) ಜೋಡಿ 48 ರನ್ ಒಟ್ಟು ಸೇರಿಸುವ ಮೂಲಕ ಲಂಕಾ ಮಾನ ಕಾಪಾಡಿದರು. ಇದಕ್ಕೆ ಮೊದಲು ಆರಂಭಿಕ ಕುಸಲ್ ಪೆರೇರಾ 51 ರನ್ ಗಳಿಸಿದ್ದರು.
ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3, ಫರ್ಗ್ಯುಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ಭೀತಿಯಿದೆ. ಒಂದು ವೇಳೆ ಇಂದು ಕಿವೀಸ್ ಗೆದ್ದರೆ ಸೆಮಿಫೈನಲ್ ಗೇರಲಿದೆ.