Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತ್ ಮಜಾ

ಬೆಂಗಳೂರಿನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತ್ ಮಜಾ
ಬೆಂಗಳೂರು , ಗುರುವಾರ, 9 ನವೆಂಬರ್ 2023 (11:10 IST)
Photo Courtesy: Twitter
ಬೆಂಗಳೂರು: ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯವಾಡಲು ಬಂದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಾಲ್ಕೈದು ದಿನಗಳ ಬ್ರೇಕ್ ಸಿಕ್ಕಿದ್ದು, ಇದನ್ನು ಅವರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕ್ರಿಕೆಟಿಗ ಕೆಎಲ್ ರಾಹುಲ್ ತವರು ಬೆಂಗಳೂರಿನಲ್ಲಿ ತಮ್ಮ ಸಹ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರಿಲ್ಯಾಕ್ಸ್ ಮಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ಇನ್ನು, ವೇಗಿ ಮೊಹಮ್ಮದ್ ಸಿರಾಜ್ ಆರ್ ಸಿಬಿ ಪರ ಐಪಿಎಲ್ ಆಡುವುದರಿಂದ ಬೆಂಗಳೂರು ಮತ್ತೊಂದು ತವರಿದ್ದಂತೆ. ಗೆಳೆಯ ಇದೀಗ ಟೀಂ ಇಂಡಿಯಾದಿಂದ ಹೊರಗಿರುವ ಅಕ್ಸರ್ ಪಟೇಲ್ ಜೊತೆಗೆ ಆರ್ ಸಿಬಿ ಕೆಫೆಯಲ್ಲಿ ಕಾಲ ಕಳೆದಿದ್ದಾರೆ. ಬಹುತೇಕ ಕ್ರಿಕೆಟಿಗರು ತಮಗೆ ಸಿಕ್ಕ ಕಿರು ಅವಧಿಯಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ನವಂಬರ್ 12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಸೆಮಿಫೈನಲ್ ಒಂದು ಸ್ಥಾನಕ್ಕಾಗಿ ಮೂರು ತಂಡಗಳ ಪೈಪೋಟಿ