Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ಇಂಗ್ಲೆಂಡ್ ಗೆ ಗೆಲುವಿನ ನಿಟ್ಟುಸಿರು

ಏಕದಿನ ವಿಶ್ವಕಪ್: ಇಂಗ್ಲೆಂಡ್ ಗೆ ಗೆಲುವಿನ ನಿಟ್ಟುಸಿರು
ಪುಣೆ , ಗುರುವಾರ, 9 ನವೆಂಬರ್ 2023 (08:20 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ.

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವನ್ನು 160 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಶತಕದ (108) ನೆರವಿನಿಂದ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು.

ಈ ಮೊತ್ತ ಬೆನ್ನತ್ತಿದ ನೆದರ್ಲ್ಯಾಂಡ್ಸ್ 37.2 ಓವರ್ ಗಳಲ್ಲಿ 179 ರನ್ ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕೊನೆಗೂ ಮಿಂಚಿದ ಸ್ಪಿನ್ನರ್ ಗಳಾದ ಮೊಯಿನ್ ಅಲಿ, ಆದಿಲ್ ರಶೀದ್ ತಲಾ 3 ವಿಕೆಟ್ ಕಬಳಿಸಿದರು. ಈ ಫಲಿತಾಂಶ ಉಭಯ ತಂಡಗಳಿಗೂ ಯಾವುದೇ ಪರಿಣಾಮ ಬೀರದು. ಹಾಗಿದ್ದರೂ ಇಂಗ್ಲೆಂಡ್ ಗೆ 8 ಪಂದ್ಯಗಳಿಂದ 2 ನೇ ಗೆಲುವು ಸಾಧಿಸಿದ ನೆಮ್ಮದಿ ಸಿಕ್ಕಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಚಿಕೆಯಾಗ್ಬೇಕು ನಿಮಗೆ! ಪಾಕಿಸ್ತಾನದ ಹಸನ್ ರಾಜಾಗೆ ಮೊಹಮ್ಮದ್ ಶಮಿ ತಪರಾಕಿ