Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಜಿಂದಾಬಾದ್ ಎಂದ ಸೆಹ್ವಾಗ್! ಆದ್ರೂ ಪಾಕ್ ಫ್ಯಾನ್ಸ್ ಸಿಟ್ಟಾಗಿದ್ದೇಕೆ?

ವೀರೇಂದ್ರ ಸೆಹ್ವಾಗ್
ನವದೆಹಲಿ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಸೆಮಿಫೈನಲ್ ನಲ್ಲಿ ಸ್ಥಾನ ಭದ್ರಪಡಿಸುತ್ತಿದ್ದಂತೇ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವಿಟರ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ವ್ಯಂಗ್ಯದ ಟ್ವೀಟ್ ಒಂದನ್ನು ಮಾಡಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಎಂದರೂ ಪಾಕ್ ಅಭಿಮಾನಿಗಳು ಸೆಹ್ವಾಗ್ ಮೇಲೆ ಕೆಂಡ ಕಾರುತ್ತಿದ್ದಾರೆ. ಇದಕ್ಕೆ ಕಾರಣ ಸೆಹ್ವಾಗ್ ಟ್ವೀಟ್ ನಲ್ಲಿರುವ ವ್ಯಂಗ್ಯ. ಪಾಕಿಸ್ತಾನ್ ಜಿಂದಾಬಾದ್ ಎಂದ ಸೆಹ್ವಾಗ್ ಬಳಿಕ ಮನೆಗೆ ಸುರಕ್ಷಿತವಾಗಿ ಹೋಗಿ ಎಂದು ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಬೈ ಬೈ ಪಾಕಿಸ್ತಾನ್ ಎಂಬ ಫೋಟೋವನ್ನೂ ಹಾಕಿ ತಮಾಷೆ ಮಾಡಿದ್ದಾರೆ. ನ್ಯೂಜಿಲೆಂಡ್ ಗೆದ್ದಿದ್ದರಿಂದ ಪಾಕ್ ಸೆಮಿಫೈನಲ್ ಕನಸು ಭಗ್ನವಾಗಿದೆ. ಈ ಹಿನ್ನಲೆಯಲ್ಲಿ ಸೆಹ್ವಾಗ್ ಈ ರೀತಿ ಕಾಲೆಳೆದಿದ್ದರು.

ಇದು ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವು ಅಭಿಮಾನಿಗಳಂತೂ ಸೆಹ್ವಾಗ್ ಪರೋಕ್ಷವಾಗಿ ಪಾಕ್ ತಂಡಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಐಸಿಸಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ಅಭಿಮಾನಿಗಳಂತೂ ಸೆಹ್ವಾಗ್ ತಮಾಷೆಯ ಕಾಮೆಂಟ್ ನ್ನು ಭಾರೀ ಇಷ್ಟಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಬೆಂಗಳೂರು ಪಂದ್ಯಕ್ಕೆ ಟೀಂ ಇಂಡಿಯಾ ಪ್ರಮುಖರಿಗೆ ರೆಸ್ಟ್?