Publish Date: Fri, 10 Nov 2023 (18:02 IST)
Updated Date: Fri, 10 Nov 2023 (14:18 IST)
ಬೆಂಗಳೂರು: ಇದೇ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಟೀಂ ಇಂಡಿಯಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವಾಡಲಿದೆ.
ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಗೇರಿರುವುದರಿಂದ ಇದು ಔಪಚಾರಿಕ ಪಂದ್ಯವಾಗಲಿದೆ. ಅದೂ ದುರ್ಬಲ ತಂಡದ ಎದುರು ಆಡುವ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಪ್ರಮುಖರಿಗೆ ರೆಸ್ಟ್ ನೀಡುವ ಸಾಧ‍್ಯತೆಯಿದೆ.
ಮೂಲಗಳ ಪ್ರಕಾರ ಸೆಮಿಫೈನಲ್ ಹಿತದೃಷ್ಟಿಯಿಂದ ಕೊಹ್ಲಿ, ಬುಮ್ರಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮುಂತಾದವರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ. ಅವರ ಬದಲು ಇಶಾನ್ ಕಿಶನ್, ಪ್ರಸಿದ್ಧ ಕೃಷ್ಣ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಒಂದು ವೇಳೆ ಕೊಹ್ಲಿ ಆಡದೇ ಹೋದಲ್ಲಿ ಬೆಂಗಳೂರು ಪ್ರೇಕ್ಷಕರಿಗೆ ತೀವ್ರ ನಿರಾಶೆಯಾಗಲಿದೆ.