Publish Date: Fri, 10 Nov 2023 (08:25 IST)
Updated Date: Fri, 10 Nov 2023 (08:44 IST)
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಸೆಮಿಫೈನಲ್ ನಲ್ಲಿ ಬಹುತೇಕ ಸ್ಥಾನ ಖಚಿತಪಡಿಸಿದೆ.
ನಾಳೆ ಪಾಕಿಸ್ತಾನ ತಂಡ ಭಾರೀ ರನ್ ರೇಟ್ ಆಧಾರದಲ್ಲಿ ಗೆದ್ದರೂ ಕಿವೀಸ್ ಹಿಂದಿಕ್ಕುವುದು ಅನುಮಾನ. ಹೀಗಾಗಿ ಬಹುತೇಕ ನ್ಯೂಜಿಲೆಂಡ್ ಸೆಮಿಫೈನಲ್ ಗೇರಿದಂತೆಯೇ ಲೆಕ್ಕ. ಇದರೊಂದಿಗೆ ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡವೇ ಎದುರಾಳಿಯಾಗುವುದು ಬಹುತೇಕ ಖಚಿತವಾಗಿದೆ.
ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 171 ರನ್ ಗಳಿಸಿ ಆಲೌಟ್ ಆಗಿತ್ತು. ಇದನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ 23.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಗೆಲುವು ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.