Publish Date: Thu, 17 Oct 2019 (09:32 IST)
Updated Date: Thu, 17 Oct 2019 (09:34 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿದ್ದಾಗ ಸೌರವ್ ಗಂಗೂಲಿಗೆ ಸ್ಪಿನ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದವರು ಹರ್ಭಜನ್ ಸಿಂಗ್. ಇದೀಗ ಬಿಸಿಸಿಐ ಅಧ‍್ಯಕ್ಷರಾಗುತ್ತಿರುವ ಗಂಗೂಲಿ ತಮ್ಮ ಆಡಳಿತಾವಧಿಯಲ್ಲಿ ಬೆಂಬಲವಾಗಿ ನಿಲ್ಲಬೇಕೆಂದು ಭಜಿಗೆ ಮನವಿ ಮಾಡಿದ್ದಾರೆ.
ಗಂಗೂಲಿ ಅಧ್ಯಕ್ಷರಾಗುತ್ತಾರೆಂಬ ಸುದ್ದಿ ಬಂದಾಗ ಹರ್ಭಜನ್ ತಮ್ಮ ಟ್ವಿಟರ್ ಪೇಜ್ ಮೂಲಕ ‘ಕ್ಯಾಪ್ಟನ್’ ಗೆ ಅಭಿನಂದನೆ ಸಲ್ಲಿಸಿದ್ದರು. ನೀವು ನಾಯಕರಾಗಿ ತಂಡದಲ್ಲಿ ಇತರರಿಗೂ ನಾಯಕನಂತೆ ಇರಲು ಶಕ್ತಿ ತುಂಬಿದ್ದೀರಿ. ಈಗ ಅಧ್ಯಕ್ಷರಾಗಿಯೂ ಆ ಕೆಲಸ ಮಾಡುತ್ತೀರಿ ಎಂದು ನನಗೆ ಗೊತ್ತು. ನಿಮಗೆ ಅಭಿನಂದನೆಗಳು ಎಂದು ಶುಭ ಹಾರೈಸಿದ್ದರು.
ಭಜಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಗಂಗೂಲಿ ‘ನಿನ್ನ ಹಾರೈಕೆಗೆ ಧನ್ಯವಾದ ಭಜ್ಜು. ಭಾರತ ತಂಡ ಗೆಲ್ಲಲು ನನಗೆ ಇನ್ನೊಂದು ತುದಿಯಿಂದ ಬೌಲಿಂಗ್ ನಲ್ಲಿ ಬೆಂಬಲವಾಗಿ ನಿಂತ ಹಾಗೆ ಈಗಲೂ ಬೆಂಬಲವಾಗಿರಬೇಕು’ ಎಂದು ಮನವಿ ಮಾಡಿದ್ದಾರೆ.