Select Your Language

Notifications

webdunia
webdunia
webdunia
webdunia

ನಿಯೋಜಿತ ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಮುಂದಿರುವ ಸವಾಲು ಇದು

ನಿಯೋಜಿತ ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಮುಂದಿರುವ ಸವಾಲು ಇದು
ಮುಂಬೈ , ಬುಧವಾರ, 16 ಅಕ್ಟೋಬರ್ 2019 (08:55 IST)
ಮುಂಬೈ: ಟೀಂ ಇಂಡಿಯಾದ ಯಶಸ್ವೀ ನಾಯಕನಾಗಿದ್ದ ಸೌರವ್ ಗಂಗೂಲಿಗೆ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವ  ಅವಕಾಶ ಬಂದಿದೆ. ಆದರೆ ಅಧ‍್ಯಕ್ಷರಾಗಲಿರುವ ಗಂಗೂಲಿ ಹಾದಿ ಸುಗಮವಾಗಿಲ್ಲ.


ಹಿಂದೆ ಅವರು ಟೀಂ ಇಂಡಿಯಾಗೆ ನಾಯಕರಾದಾಗಲೂ ತಂಡದ ಸ್ಥಿತಿ ಹೀಗೆಯೇ ಇತ್ತು. ಮ್ಯಾಚ್ ಫಿಕ್ಸಿಂಗ್ ಕಪಿಮುಷ್ಠಿಯಲ್ಲಿ ನಲುಗಿದ್ದ ತಂಡವನ್ನು ಯಶಸ್ಸಿಗೆ ಹಳಿಗೆ ತಂದು ನಿಲ್ಲಿಸಿದ ಕೀರ್ತಿ ಗಂಗೂಲಿಯದ್ದು. ಹಠವಾದಿ, ಛಲವಾದಿ, ಆಕ್ರಮಣಕಾರಿ ಮನೋಭಾವ, ಹುಂಬುತನ ಇದು ಗಂಗೂಲಿಯ ಸ್ವಭಾವ. ಅವರ ಈ ಕಠಿಣ ಮನಸ್ಥಿತಿಯೇ ಟೀಂ ಇಂಡಿಯಾಕ್ಕೆ ಹಲವು ಪ್ರತಿಭಾವಂತ ಕ್ರಿಕೆಟಿಗರನ್ನು ನೀಡಿತು.

ಈಗ ಬಿಸಿಸಿಐ ಕೂಡಾ ಅದೇ ಪರಿಸ್ಥಿತಿಯಲ್ಲಿ ಇದೆ. ಲೋಧಾ ಸಮಿತಿ ಅನ್ವಯಾದ ಮೇಲೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಬಿಸಿಸಿಐ ಆಡಳಿತಾತ್ಮಕವಾಗಿ ಹಲವು ಗೊಂದಲದಲ್ಲಿದೆ. ಹಲವು ನಿಯಮಗಳು ಗೊಂದಲಪೂರ್ಣವಾಗಿದೆ. ಇದೆಲ್ಲದರಿಂದಾಗಿ ಒಟ್ಟಾರೆಯಾಗಿ ಬಿಸಿಸಿಐ ಮಂಕು ಕವಿದಂತಿದೆ.

ಅದೆಲ್ಲವನ್ನೂ ಸರಿಪಡಿಸುವ ಸವಾಲು ಈಗ ದಾದಾ ಗಂಗೂಲಿ ತಲೆಮೇಲಿದೆ. ಒಂದೊಂದಾಗಿ ಒಂದೊಂದನ್ನೇ ಸರಿಪಡಿಸುವ ಮಾತುಗಳನ್ನು ಗಂಗೂಲಿ ಈಗಾಗಲೇ ಹೇಳಿದ್ದಾರೆ. ಎಲ್ಲಕ್ಕಿಂತ ಮೊದಲು ಅವರ ಆದ್ಯತೆ ಸ್ವಹಿತಾಸಕ್ತಿ ಹುದ್ದೆ ಎಂದು ಈಗಾಗಲೇ ಹೇಳಿದ್ದಾರೆ.

ಸ್ವ ಹಿತಾಸಕ್ತಿ ಸಂಘರ್ಷದಿಂದಾಗಿ ಎಷ್ಟೋ ಪ್ರಮುಖರಿಗೆ ಬಿಸಿಸಿಐ ಹುದ್ದೆ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಸ್ವತಃ ಗಂಗೂಲಿಗೂ ಒಮ್ಮೆ ಈ ಸಂಘರ್ಷ ಬಂದಿತ್ತು. ಅದರ ಜತೆಗೆ ದೇಶೀಯ ಕ್ರಿಕೆಟ್ ಗೆ ಹೊಸ ಕಾಯಕಲ್ಪ ನೀಡುವುದಕ್ಕೂ ಅವರು ಒತ್ತು ನೀಡಬೇಕಿದೆ. ಇದೆಲ್ಲಾ ಸವಾಲುಗಳನ್ನು ಗಂಗೂಲಿ ತಲುಪಬಹುದು ಎಂಬ ವಿಶ್ವಾಸ ಎಲ್ಲರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ರವಿಶಾಸ್ತ್ರಿಯನ್ನು ಕಿತ್ತು ಹಾಕಿ! ನೂತನ ಅಧ್ಯಕ್ಷ ಗಂಗೂಲಿ ಮಾಡಬೇಕಾದ ಕೆಲಸ ಇದುವೇ ಅಂತೆ!