Publish Date: Tue, 15 Oct 2019 (09:57 IST)
Updated Date: Tue, 15 Oct 2019 (09:59 IST)
ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗುತ್ತಿರುವುದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಹುದ್ದೆ ಪಟ್ಟಕ್ಕೇರಲು ಗಂಗೂಲಿಗೆ ಹಲವು ಪ್ರಮುಖರು ಬೆಂಬಲ ನೀಡಿದ್ದಾರೆ. ಅದರಲ್ಲೂ ತಮ್ಮನ್ನು ಸದಾ ಬೆಂಬಲಿಸಿದ ತವರು ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಗಂಗೂಲಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ತಾನು ಈ ಹುದ್ದೆಗೇರಲು ಯಾವುದೇ ರಾಜಕೀಯ ನಾಯಕರಿಂದ ಹಣ ಪಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಗಂಗೂಲಿ ಅಧ್ಯಕ್ಷರಾಗುತ್ತಿರುವ ಸುದ್ದಿ ತಿಳಿದು ಸಿಎಂ ಮಮತಾ ಬ್ಯಾನರ್ಜಿ ಕೂಡಾ ಶುಭ ಹಾರೈಸಿದ್ದಾರೆ. ಗಂಗೂಲಿ ನೇತೃತ್ವದಲ್ಲಿ ಬಿಸಿಸಿಐ ಭಾರತೀಯ ಕ್ರಿಕೆಟ್ ರಂಗವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಲಿ ಎಂದು ಅವರು ಹಾರೈಸಿದ್ದಾರೆ.