Publish Date: Sat, 05 Oct 2019 (09:28 IST)
Updated Date: Sat, 05 Oct 2019 (09:31 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಯುವರಾಜ್ ಸಿಂಗ್ ರಂತೆ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ನನ್ನ ಮಾತೃ ಸಂಸ್ಥೆ (ಬಿಸಿಸಿಐ) ವಿರುದ್ಧ ಹೋಗುವ ಇರಾದೆ ನನಗಿಲ್ಲ. ಸದ್ಯಕ್ಕೆ ಐಪಿಎಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವಷ್ಟೇ ನನ್ನ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಳೆದ ಎರಡು ಋತುವಿನ ಐಪಿಎಲ್ ನಲ್ಲಿ ಉತ್ತಮವಾಗಿ ಆಡಿದ್ದೆ. ಈಗ ಮೂರನೇ ಋತುವಿಗೆ ಹೆಜ್ಜೆ ಹಾಕುತ್ತಿದ್ದೇನೆ. ನಾನು ಯಾವತ್ತೂ ಬಿಸಿಸಿಐ ನಿಯಮಗಳಿಗೆ ವಿರುದ್ಧವಾಗಿ ಹೋಗಲ್ಲ. ಯಾವಾಗ ನಿಯಮ ನನಗೆ ಇಂತಹ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತೋ ಆಗಲೇ ಆಡುತ್ತೇನೆ’ ಎಂದು ಭಜಿ ಹೇಳಿಕೊಂಡಿದ್ದಾರೆ.