Publish Date: Sat, 05 Oct 2019 (09:02 IST)
Updated Date: Sat, 05 Oct 2019 (09:04 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.
ತೃತೀಯ ದಿನದಾಟದಲ್ಲಿ ಜಡೇಜಾ ಡೀನ್ ಎಲ್ಗರ್ ವಿಕೆಟ್ ಕಬಳಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೆ, ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 200 ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.
ಮೊದಲ ಸ್ಥಾನ ರವಿಚಂದ್ರನ್ ಅಶ್ವಿನ್ ರದ್ದು. ಅವರು 37 ಟೆಸ್ಟ್ ಗಳಿಂದ ಈ ದಾಖಲೆ ಮಾಡಿದ್ದರು. ಜಡೇಜಾ 44 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.