Select Your Language

Notifications

webdunia
webdunia
webdunia
webdunia

ಸೂಪರ್ ಓವರ್ ನಿಯಮಕ್ಕೆ ಬದಲಾವಣೆ ತಂಡದ ಐಸಿಸಿ: ಹೊಸ ನಿಯಮವೇನು ಗೊತ್ತಾ?

ಸೂಪರ್ ಓವರ್ ನಿಯಮಕ್ಕೆ ಬದಲಾವಣೆ ತಂಡದ ಐಸಿಸಿ: ಹೊಸ ನಿಯಮವೇನು ಗೊತ್ತಾ?
ದುಬೈ , ಗುರುವಾರ, 17 ಅಕ್ಟೋಬರ್ 2019 (09:29 IST)
ದುಬೈ: ವಿಶ್ವಕಪ್ ಟೂರ್ನಿಯಂತಹ ಪ್ರಮುಖ ಕೂಟಗಳಲ್ಲಿ ಪಂದ್ಯ ಸಮಬಲವಾದಾಗ ಅಳವಡಿಸುವ ಸೂಪರ್ ಓವರ್ ನಿಯಮಾವಳಿಗೆ ಐಸಿಸಿ ಕೆಲವು ಬದಲಾವಣೆ ತಂದಿದೆ.


ಈ ಬಾರಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲೂ ಸ್ಕೋರ್ ಟೈ ಆದಾಗ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡ್ ನ್ನು ವಿಜಯಿಯೆಂದು ಘೋಷಿಸಲಾಗಿತ್ತು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ದುಬೈಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಈ ನಿಯಮಾಳಿಗೆ ಕೊಂಚ ಬದಲಾವಣೆ ತಂದಿದೆ.

ಇನ್ನು ಮುಂದೆ ಸೂಪರ್ ಓವರ್ ನಲ್ಲೂ ಸ್ಕೋರ್ ಸಮಬಲವಾದಾಗ ಮತ್ತೆ ಸೂಪರ್ ಓವರ್ ಮಾಡಬೇಕಾಗುತ್ತದೆ. ಎಲ್ಲಿಯವರೆಗೆ ಒಂದು ತಂಡ ಹೆಚ್ಚು ರನ್ ಗಳಿಸುವುದೋ ಅಲ್ಲಿಯವರೆಗೆ ಸೂಪರ್ ಓವರ್ ನಡೆಸಲು ಐಸಿಸಿ ನಿರ್ಧರಿಸಿದೆ. ಈ ನಿರ್ಧಾರವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸ್ವಾಗತಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಮಾಡದ ವಿಶ್ವ ದಾಖಲೆ ಮಾಡಿದ 17 ರ ಹುಡುಗ!