Select Your Language

Notifications

webdunia
webdunia
webdunia
webdunia

ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಮಾಡದ ವಿಶ್ವ ದಾಖಲೆ ಮಾಡಿದ 17 ರ ಹುಡುಗ!

ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಮಾಡದ ವಿಶ್ವ ದಾಖಲೆ ಮಾಡಿದ 17 ರ ಹುಡುಗ!
ಮುಂಬೈ , ಗುರುವಾರ, 17 ಅಕ್ಟೋಬರ್ 2019 (09:25 IST)
ಮುಂಬೈ: ವಿಶ್ವ ಕ್ರಿಕೆಟ್ ನಲ್ಲಿ ಸೀಮಿತ ಓವರ್ ಗಳ ಪಂದ್ಯದಲ್ಲಿ ದ್ವಿಶತಕ ಬಾರಿಸಿ ದಾಖಲೆ ಮಾಡಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಕ್ರಿಸ್ ಗೇಲ್ ಇತ್ಯಾದಿ ಹೆಸರುಗಳು ಬರುತ್ತವೆ. ಆದರೆ ಇವರು ಯಾರೂ ಮಾಡದ ದಾಖಲೆಯೊಂದನ್ನು ಇದೀಗ ಮುಂಬೈ ಮೂಲದ ಯುವ ಆಟಗಾರ ಮಾಡಿದ್ದಾನೆ!


ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆರಂಭಿಕರಾಗಿರುವ ಯಶಸ್ವಿ ಜೈಸ್ವಾಲ್ ಹೊಸ ವಿಶ್ವದಾಖಲೆಯೊಂದನ್ನು ಮಾಡಿದ್ದಾರೆ. ಇನ್ನೂ 17 ವರ್ಷ 292 ದಿನಗಳ ವಯಸ್ಸಿನ ಈ ಹುಡುಗ ಅತ್ಯಂತ ಕಿರಿಯ ವಯಸ್ಸಿಗೆ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ದಾಖಲೆ ಮಾಡಿದ್ದಾರೆ.

ಇದಕ್ಕೂ ಮೊದಲು ಅತ್ಯಂತ ಕಿರಿಯ ವಯಸ್ಸಿಗೆ ದ್ವಿಶತಕ ಬಾರಿಸಿದ ದಾಖಲೆ ದ.ಆಫ್ರಿಕಾದ ಅಲೆಕ್ಸ್ ಬ್ಯಾರೋ ಎಂಬವರ ಹೆಸರಲ್ಲಿತ್ತು. 20 ವರ್ಷ ವಯಸ್ಸಿನಲ್ಲಿ ಈತ ಅಲ್ಲಿನ ದೇಶೀಯ ಪಂದ್ಯದಲ್ಲಿ ದಾಖಲೆ ಮಾಡಿದ್ದ. ಈಗ ಆ ದಾಖಲೆಯನ್ನು ಜೈಶ್ವಾಲ್ ಮುರಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುತಾತ್ಮ ಯೋಧರ ಮಕ್ಕಳಿಗೆ ತರಬೇತಿ ನೀಡುತ್ತಿರುವ ವೀರೇಂದ್ರ ಸೆಹ್ವಾಗ್