Select Your Language

Notifications

webdunia
webdunia
webdunia
webdunia

ಹುತಾತ್ಮ ಯೋಧರ ಮಕ್ಕಳಿಗೆ ತರಬೇತಿ ನೀಡುತ್ತಿರುವ ವೀರೇಂದ್ರ ಸೆಹ್ವಾಗ್

ಹುತಾತ್ಮ ಯೋಧರ ಮಕ್ಕಳಿಗೆ ತರಬೇತಿ ನೀಡುತ್ತಿರುವ ವೀರೇಂದ್ರ ಸೆಹ್ವಾಗ್
ನವದೆಹಲಿ , ಗುರುವಾರ, 17 ಅಕ್ಟೋಬರ್ 2019 (09:23 IST)
ನವದೆಹಲಿ: ಯೋಧನೊಬ್ಬ ದೇಶಕ್ಕಾಗಿ ಪ್ರಾಣ ತೆತ್ತಾದಾಗ ಹಲವರು ಕಂಬನಿ ಮಿಡಿಯಬಹುದು, ಮತ್ತೆ ಕೆಲವರು ಧನಸಹಾಯ ಮಾಡಬಹುದು. ಅದು ಬಿಟ್ಟರೆ ಅವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಬಹುದು.


ಆದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಒಡೆತನದ ಶಾಲೆಯಲ್ಲಿ ಇಬ್ಬರು ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರಿಕೆಟ್ ತರಬೇತಿಯನ್ನೂ ನೀಡುತ್ತಿದ್ದಾರೆ. ಈ ಮಕ್ಕಳ ವಿಡಿಯೋವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ರಾಮ್ ವಕೀಲ್ ಮತ್ತು ವಿಜಯ್ ಸೊರೆಂಗ್ ಪುತ್ರರಿಗೆ ಸೆಹ್ವಾಗ್ ತಮ್ಮ ಶಾಲೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಇವರು ಹೀರೋಗಳ ಮಕ್ಕಳು ಎಂದು ಕರೆದಿರುವ ಸೆಹ್ವಾಗ್, ಇವರಿಗೆ ನಮ್ಮ ಶಾಲೆಯಲ್ಲಿ ಅವಕಾಶ ನೀಡುವುದೇ ನಮಗೆ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಸೆಹ್ವಾಗ್ ರ ಈ ಕ್ರಮಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಬರಲ್ಲ ಎಂದು ಛೇಡಿಸಿದ ಅಭಿಮಾನಿಯ ಚಳಿ ಬಿಡಿಸಿದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್