Publish Date: Fri, 18 Oct 2019 (09:21 IST)
Updated Date: Fri, 18 Oct 2019 (13:52 IST)
ಮುಂಬೈ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೇ ಮತ್ತೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯುತ್ತಾ ಎಂಬ ಪ್ರಶ್ನೆ ಎದುರಾಗಿದೆ.
ಇದೇ ಪ್ರಶ್ನೆಯನ್ನು ಗಂಗೂಲಿಗೆ ಕೇಳಿದಾಗ ಈ ವಿಚಾರವನ್ನು ನಿರ್ಧರಿಸುವವನು ನಾನಲ್ಲ. ಭಾರತದ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಲಿದ್ದಾರೆ ಎಂದಿದ್ದಾರೆ.
ಪುಲ್ವಾಮಾ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯ ಸಂಪೂರ್ಣ ನಿಂತಿದೆ. ವಿಶ್ವಕಪ್ ನಲ್ಲಿಯೂ ಟೀಂ ಇಂಡಿಯಾ ಪಾಕ್ ವಿರುದ್ಧದ ಆಟ ಬಹಿಷ್ಕರಿಸಬೇಕು ಎಂಬ ಮಾತು ಕೇಳಿಬಂದಿತ್ತು. ಆಗ ಸ್ವತಃ ಗಂಗೂಲಿ ಕೂಡಾ ಅದೇ ಅಭಿಪ್ರಾಯ ಹೇಳಿದ್ದರು. ಇದೀಗ ತಾವು ಅಧ್ಯಕ್ಷರಾದ ಮೇಲೆ ಉಭಯ ದೇಶಗಳ ನಡುವಿನ ಸರಣಿಗೆ ಚಾಲನೆ ನೀಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ಎರಡೂ ದೇಶಗಳ ಪ್ರಧಾನಿಗಳ ಒಪ್ಪಿಗೆ ಬೇಕು ಎಂದಿದ್ದಾರೆ.