Publish Date: Thu, 17 Oct 2019 (10:04 IST)
Updated Date: Thu, 17 Oct 2019 (14:10 IST)
ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ ಮರುದಿನವೇ ಧೋನಿ ವಿಚಾರ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ.
ಧೋನಿ ಟೀಂ ಇಂಡಿಯಾದಲ್ಲಿ ಮುಂದುವರಿಯಬೇಕೋ ಅಥವಾ ಭವಿಷ್ಯದ ದೃಷ್ಟಿಯಿಂದ ನಿವೃತ್ತಿಯಾಗಬೇಕೋ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಧೋನಿ ಮಾತ್ರ ಈ ಬಗ್ಗೆ ತುಟಿ ಪಿಟಕ್ ಎನ್ನದೇ ಸುದೀರ್ಘ ಸಮಯದಿಂದ ತಂಡದಿಂದ ಬಿಡುವು ಪಡೆದಿದ್ದಾರೆ.
‘ಅಕ್ಟೋಬರ್ 24 ಕ್ಕೆ ಆಯ್ಕೆ ಸಮಿತಿ ಸದಸ್ಯರನ್ನು ಭೇಟಿಯಾಗಿ ಧೋನಿ ಭವಿಷ್ಯದ ಬಗ್ಗೆ ಚರ್ಚಿಸುವೆ. ಬಳಿಕ ಧೋನಿ ಜತೆಗೂ ಮಾತನಾಡಿ ಅವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳುವೆ. ನನಗೆ ಇದುವರೆಗೆ ಧೋನಿ ವಿಚಾರ ಸ್ಪಷ್ಟವಾಗಿಲ್ಲ. ಹೀಗಾಗಿ ಅದಕ್ಕೊಂದು ಅಂತ್ಯ ನೀಡುವೆ’ ಎಂದು ಗಂಗೂಲಿ ಹೇಳಿದ್ದಾರೆ.