ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ ತಮ್ಮ ನಿಕ್ ನೇಮ್ ಏನು ಮತ್ತು ಆ ಹೆಸರಿನಿಂದ ತಮ್ಮನ್ನು ಕರೆಯಲು ಕಾರಣವೇನೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಎಲ್ಲಾ ಕ್ರಿಕೆಟಿಗರಿಗೂ ವಿಶೇಷ ಅಡ್ಡ ಹೆಸರುಗಳಿರುತ್ತವೆ. ಉದಾಹರಣೆಗೆ ವಿರಾಟ್ ಕೊಹ್ಲಿಗೆ ಚೀಕು, ರಾಹುಲ್ ದ್ರಾವಿಡ್ ಗೆ ಜ್ಯಾಮಿ ಹೀಗೆ.. ಅದೇ ರೀತಿ ಸ್ಮೃತಿ ಮಂಧಾನಗೂ ಒಂದು ನಿಕ್ ನೇಮ್ ಇದೆಯಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ.
ಸ್ಮೃತಿ ಮಂಧಾನಗೆ ಅವರ ತಂದೆ ಇಟ್ಟಿರುವ ನಿಕ್ ನೇಮ್ ಬೇಬೂ. ಈ ಹೆಸರಿನಿಂದ ಕರೆಯುವುದಕ್ಕೆ ಒಂದು ಕಾರಣವೂ ಇದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸ್ಮೃತಿ ಚಿಕ್ಕವರಿದ್ದಾಗ ಅವರ ತಂದೆಗೆ ಸ್ಮೃತಿ ಎಂಬ ಹೆಸರು ಹೇಳುವುದಕ್ಕೆ ಕಷ್ಟವಾಗುತ್ತಿತ್ತಂತೆ. ಹೀಗಾಗಿ ಸುಲಭವಾಗಲು ಬೇಬೂ ಎಂದು ಅಡ್ಡ ಹೆಸರಿಟ್ಟರು.
ಇದು ಎಷ್ಟರ ಮಟ್ಟಿಗೆ ಎಂದರೆ ಅವರ ಶಾಲೆಗೆ ಬಂದು ಸ್ಮೃತಿ ಎಂದು ಹೇಳಲು ಕಷ್ಟವಾಗುತ್ತದೆ ಎಂದು ಬೇಬೂ ಎಂದು ಕರೆಯತ್ತಿದ್ದರಂತೆ. ಬೇಬೂ ಎಂದು ಹೊರಗೆ ಹೇಳಿಕೊಳ್ಳಲು ಸ್ವಲ್ಪ ನಾಚಿಕೆಯಾಗುತ್ತದೆ. ಆದರೆ ತಂದೆ ಕರೆಯುವ ಈ ಹೆಸರು ಇಷ್ಟ ಎಂದು ಸ್ಮೃತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.