ಮುಂಬೈ: ಸ್ಮೃತಿ ಮಂಧಾನ ಜೊತೆ ಮದುವೆ ಏನಾಗುತ್ತೋ ಗೊತ್ತಿಲ್ಲ. ಇದೇ ಆತಂಕದಲ್ಲಿ ಪಾಲಾಶ್ ಮುಚ್ಚಲ್ ಎಲ್ಲಿ ಸೇರಿದ್ದಾರೆ ನೋಡಿ. ನಿಜಕ್ಕೂ ಶಾಕಿಂಗ್.
ನವಂಬರ್ 23 ರಂದು ಈ ಜೋಡಿ ಹಸೆಮಣೆಗೇರಬೇಕಿತ್ತು. ಆದರೆ ಮದುವೆ ದಿನ ಸ್ಮೃತಿ ತಂದೆಗೆ ಹೃದಯಾಘಾತವಾಗಿತ್ತು. ಹೀಗಾಗಿ ಮದುವೆ ದಿಡೀರ್ ಮುಂದೂಡಿಕೆಯಾಗಿತ್ತು. ಆದರೆ ಇದರ ಬೆನ್ನಲ್ಲೇ ಪಾಲಾಶ್ ಹಳೆಯ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ಮತ್ತು ಯುವತಿಯೊಬ್ಬಳು ತನ್ನೊಂದಿಗೆ ಪಾಲಾಶ್ ಚ್ಯಾಟ್ ಮಾಡಿದ್ದಾನೆ ಎಂದಿದ್ದ ಸಂದೇಶಗಳು ವೈರಲ್ ಆಗಿದ್ದವು.
ಹೀಗಾಗಿ ಈಗ ಮದುವೆಯಾಗುತ್ತೋ ಇಲ್ಲವೋ ಎಂಬುದೇ ಅನಿಶ್ಚಿತತೆಯಲ್ಲಿದೆ. ಈ ನಡುವೆ ಡಿಸೆಂಬರ್ 7 ಕ್ಕೆ ಮದುವೆಯಾಗಲಿದೆ ಎಂದು ಸುದ್ದಿ ಬಂದಿತ್ತಾದರೂ ಇದೆಲ್ಲಾ ಸುಳ್ಳು ಎಂದು ಸ್ಮೃತಿ ಸಹೋದರ ಶ್ರವಣ್ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ಪಾಲಾಶ್ ಮುಚ್ಚಲ್ ಈಗ ಆತಂಕದಲ್ಲಿದ್ದಾರೆ. ಹೀಗಾಗಿ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಸೆಲೆಬ್ರಿಟಿಗಳು ಭೇಟಿ ನೀಡುವ ಪ್ರೇಮಾನಂದ ಮಹಾರಾಜ ಆಶ್ರಮಕ್ಕೆ ಪಾಲಾಶ್ ಭೇಟಿ ನೀಡಿದ್ದಾರೆ. ಆಶ್ರಮದಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.ಅವರ ಕೈಯಲ್ಲಿ ಮೆಹಂದಿ ಕಲರ್ ಇನ್ನೂ ಮಾಸಿಲ್ಲ. ನೆಟ್ಟಿಗರು ಈ ಫೋಟೋಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಇದೆಲ್ಲಾ ಸಿಂಪಥಿ ಗಿಟ್ಟಿಸುವ ಪ್ರಯತ್ನವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಜೀವನವೇ ಅನಿಶ್ಚಿತೆಯಲ್ಲಿರುವಾಗ ನೆಮ್ಮದಿ ಅರಸಿ ಹೋಗಿರಬಹುದು ಎಂದಿದ್ದಾರೆ.