ಮುಂಬೈ: ನಿಂತು ಹೋಗಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಮದುವೆ ಮತ್ತೆ ನಡೆಯುತ್ತಾ? ಈ ಅನುಮಾನಗಳಿಗೆ ಪಾಲಾಶ್ ಮುಚ್ಚಲ್ ತಾಯಿ ಸ್ಪಷ್ಟನೆ ನೀಡಿದ್ದಾರೆ.
ಸ್ಮೃತಿ ಮಂಧಾನ-ಪಾಲಾಶ್ ಮದುವೆ ದಿಡೀರ್ ರದ್ದಾದ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಮೊದಲು ಸ್ಮೃತಿ ತಂದೆಗೆ ಹೃದಯಾಘಾತವಾಗಿದ್ದರಿಂದ ಮದುವೆ ನಿಂತಿದೆ ಎನ್ನಲಾಗಿತ್ತು. ಆದರೆ ನಂತರ ಪಾಲಾಶ್ ಬೇರೆ ಹುಡುಗಿಯೊಂದಿಗೆ ಚ್ಯಾಟಿಂಗ್ ಮಾಡಿದ್ದ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದರ ನಡುವೆ ಇಬ್ಬರ ಮದುವೆ ನಡೆಯಲ್ಲ. ಬ್ರೇಕಪ್ ಆಗಿದೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. ಅದರ ನಡುವೆ ಈಗ ಪಾಲಾಶ್ ಕೂಡಾ ಒತ್ತಡಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು.
ಇದೀಗ ಪಾಲಾಶ್ ತಾಯಿ ಮಾಧ್ಯಮಗಳಿಗೆ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ಮೃತಿ ಮತ್ತು ಪಾಲಾಶ್ ಇಬ್ಬರೂ ಬೇಸರದಲ್ಲಿದ್ದಾರೆ. ಪಾಲಾಶ್ ತನ್ನ ಪತ್ನಿಯೊಂದಿಗೆ ಮನೆಗೆ ಬರಬಹುದು ಎಂದು ಕನಸು ಕಂಡಿದ್ದ. ನಾನೂ ನನ್ನ ಸೊಸೆಯನ್ನು ಬರಮಾಡಿಕೊಳ್ಳಲು ವಿಶೇಷ ಪ್ಲ್ಯಾನ್ ಮಾಡಿಕೊಂಡಿದ್ದೆ. ಎಲ್ಲಾ ಸರಿ ಹೋಗುತ್ತೆ, ಸದ್ಯದಲ್ಲೇ ಇಬ್ಬರೂ ಮದುವೆಯಾಗುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸ್ಮೃತಿ ಕಡೆಯಿಂದ ಇದುವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.