Select Your Language

Notifications

webdunia
webdunia
webdunia
webdunia

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

Smriti Mandhana-Palash

Krishnaveni K

ಮುಂಬೈ , ಮಂಗಳವಾರ, 25 ನವೆಂಬರ್ 2025 (10:17 IST)
Photo Credit: X
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ವಿಚಾರ ಈಗ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡಿ ಸ್ಮೃತಿಗೇ ಪಾಲಾಶ್ ಮೋಸ ಮಾಡಿದ್ದಾರಾ ಎಂದು ಅನುಮಾನ ಮೂಡಿಸುವಂತಹ ಪೋಸ್ಟ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಭಾನುವಾರ ಸ್ಮೃತಿ ಮದುವೆಯಾಗಬೇಕಿತ್ತು. ಆದರೆ ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನ ಹೃದಯಘಾತಕ್ಕೊಳಗಾಗಿದ್ದರಿಂದ ಮದುವೆ ಕಾರ್ಯಕ್ರಮ ಸ್ಥಗಿತವಾಗಿತ್ತು ಎಂದು ವರದಿಯಾಗಿತ್ತು. ಅದಾಗಿ ಕೆಲವೇ ಸಮಯದಲ್ಲಿ ಪಾಲಾಶ್ ಕೂಡಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸುದ್ದಿಯಾಗಿತ್ತು.

ಈ ವಿದ್ಯಮಾನಗಳೆಲ್ಲಾ ನಡೆದ ಬೆನ್ನಲ್ಲೇ ಸ್ಮೃತಿ ತಮ್ಮ ಇನ್ ಸ್ಟಾಗ್ರಾಂನಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದರು. ಇದು ಮದುವೆ ಬಗ್ಗೆ ಅನುಮಾನ ಮೂಡಿಸಿತ್ತು. ಇದರ ನಡುವೆ ಪಾಲಾಶ್ ಸಹೋದರಿ, ಗಾಯಕಿ ಪಾಲಾಕ್ ಇನ್ ಸ್ಟಾಗ್ರಾಂನಲ್ಲಿ ಸ್ಮೃತಿ ತಂದೆಯ ಅನಾರೋಗ್ಯ ಕಾರಣದಿಂದ ಮದುವೆ ಮುಂದೂಡಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಇಂದು ಪಾಲಾಶ್ ಮಹಿಳೆಯೊಬ್ಬಳ ಜೊತೆಗೆ ನಡೆಸಿದ್ದಾರೆ ಎನ್ನಲಾದ ಇನ್ ಸ್ಟಾಗ್ರಾಂ ಚ್ಯಾಟ್ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ. ಮೇರಿ ಡಿ ಕೋಸ್ತಾ ಎಂಬ ಮಹಿಳೆ ತನ್ನ ಇನ್ ಸ್ಟಾಗ್ರಾಂನಲ್ಲಿ ಪಾಲಾಶ್ ಜೊತೆ ತಾನು ನಡೆಸಿದ್ದೇನೆ ಎನ್ನಲಾಗಿರುವ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾಳೆ.

ಈ ಪೋಸ್ಟ್ ನಲ್ಲಿ ಪಾಲಾಶ್ ತಾನಾಗಿಯೇ ಮಹಿಳೆಯನ್ನು ಬೀಚ್ ಗೆ ಬಾ, ಸ್ವಿಮ್ಮಿಂಗ್ ಪೂಲ್ ಗೆ ಬಾ ಎಂದು ಡೇಟಿಂಗ್ ಗೆ ಕರೆಯುವ ಸಂದೇಶಗಳಿವೆ. ಇದನ್ನು ನೋಡಿದರೆ ಸ್ಮೃತಿ ಜೊತೆ ರಿಲೇಷನ್ ಶಿಪ್ ನಲ್ಲಿದ್ದಾಗಲೇ ಪಾಲಾಶ್ ಚೀಟಿಂಗ್ ಮಾಡಿದ್ದಾರಾ ಎಂದು ಅನುಮಾನ ಮೂಡಿಸುವಂತಿದೆ. ಈ ಪೋಸ್ಟ್ ಗಳ ಸತ್ಯಾಸತ್ಯತೆ ಖಚಿತವಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಂತೂ ಪೋಸ್ಟ್ ವೈರಲ್ ಆಗಿದ್ದು,  ಸ್ಮೃತಿಗೆ ಪಾಲಾಶ್ ಮೋಸ ಮಾಡಿದನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್