ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಬಗ್ಗೆ ಸಹೋದರ ಶ್ರವಣ್ ಮಂಧಾನ ಸ್ಪಷ್ಟನೆ ಕೊಟ್ಟಿದ್ದು ಫ್ಯಾನ್ಸ್ ನಿರೀಕ್ಷೆಗಳು ಸುಳ್ಳಾಗಿವೆ.
ನವಂಬರ್ 23 ರಂದು ಈ ಜೋಡಿ ಹಸೆಮಣೆಗೇರಬೇಕಿತ್ತು. ಆದರೆ ಮದುವೆ ದಿನ ಸ್ಮೃತಿ ತಂದೆಗೆ ಹೃದಯಾಘಾತವಾಗಿತ್ತು. ಹೀಗಾಗಿ ಮದುವೆ ದಿಡೀರ್ ಮುಂದೂಡಿಕೆಯಾಗಿತ್ತು. ಆದರೆ ಇದರ ಬೆನ್ನಲ್ಲೇ ಪಾಲಾಶ್ ಹಳೆಯ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ಮತ್ತು ಯುವತಿಯೊಬ್ಬಳು ತನ್ನೊಂದಿಗೆ ಪಾಲಾಶ್ ಚ್ಯಾಟ್ ಮಾಡಿದ್ದಾನೆ ಎಂದಿದ್ದ ಸಂದೇಶಗಳು ವೈರಲ್ ಆಗಿದ್ದವು.
ಈ ನಡುವೆ ಮದುವೆ ಮುರಿದು ಬಿತ್ತು ಎಂಬ ಊಹಾಪೋಹಗಳಿತ್ತು. ಅದರ ನಡುವೆ ನಿನ್ನೆ ಇದ್ದಕ್ಕಿದ್ದಂತೆ ಡಿಸೆಂಬರ್ 7 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂದು ಸುದ್ದಿಯಾಗಿತ್ತು. ಇದೀಗ ಆ ಸುದ್ದಿಗಳಿಗೆ ಶ್ರವಣ್ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಗಳು ಹೇಗೆ ಹುಟ್ಟಿಕೊಂಡಿತು ಎಂದು ನನಗೆ ಗೊತ್ತಿಲ್ಲ. ಡಿಸೆಂಬರ್ 7 ಕ್ಕೆ ಮದುವೆಯಾಗುತ್ತಿಲ್ಲ. ಇದು ಸುಳ್ಳು ಸುದ್ದಿ. ಸದ್ಯದ ಮಟ್ಟಿಗೆ ಈಗಲೂ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ ಎಂದಷ್ಟೇ ನಾನು ಹೇಳಬಲ್ಲೆ ಎಂದು ಶ್ರವಣ್ ಹೇಳಿದ್ದಾರೆ.