ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಾಲಾಶ್ ಮುಚ್ಚಲ್ ಹೊಸ ಮದುವೆ ದಿನಾಂಕ ಫಿಕ್ಸ್ ಆಗಿದೆ ಎಂದು ಸುದ್ದಿ ಹರಿದಾಡುತ್ತಿದೆ.
ನವಂಬರ್ 23 ರಂದು ಈ ಜೋಡಿ ಹಸೆಮಣೆಗೇರಬೇಕಿತ್ತು. ಆದರೆ ಮದುವೆ ದಿನ ಸ್ಮೃತಿ ತಂದೆಗೆ ಹೃದಯಾಘಾತವಾಗಿತ್ತು. ಹೀಗಾಗಿ ಮದುವೆ ದಿಡೀರ್ ಮುಂದೂಡಿಕೆಯಾಗಿತ್ತು. ಆದರೆ ಇದರ ಬೆನ್ನಲ್ಲೇ ಪಾಲಾಶ್ ಹಳೆಯ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ಮತ್ತು ಯುವತಿಯೊಬ್ಬಳು ತನ್ನೊಂದಿಗೆ ಪಾಲಾಶ್ ಚ್ಯಾಟ್ ಮಾಡಿದ್ದಾನೆ ಎಂದಿದ್ದ ಸಂದೇಶಗಳು ವೈರಲ್ ಆಗಿದ್ದವು.
ಹೀಗಾಗಿ ಪಾಲಾಶ್ ವಂಚನೆ ಮಾಡಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು. ಇದರ ನಡುವೆ ಈಗ ಸ್ಮೃತಿ ಮಂಧಾನ ಮತ್ತು ಪಾಲಾಶ್ ಹೊಸ ಮದುವೆ ದಿನಾಂಕ ವೈರಲ್ ಆಗಿದೆ. ಡಿಸೆಂಬರ್ 7 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂದು ಸುದ್ದಿಯಾಗಿದೆ.
ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ ಸ್ಮೃತಿ ಸಹೋರ ಶ್ರವಣ್ ಮಂಧಾನ ಈಗಾಗಲೇ ಸುದ್ದಿಯಾಗಿರುವಂತೆ ಪಾಲಾಶ್ ವಂಚನೆ ಮಾಡಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದಿದ್ದಾರೆ ಎಂದು ವರದಿಯಾಗಿದೆ.