ವಿಶಾಖಪಟ್ಟಣಂ: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸಂಜು ಸ್ಯಾಮ್ಸನ್ ಈ ಒಂದು ಕಾರಣಕ್ಕಾಗಿಯಾದರೂ ಮತ್ತೆ ಫಾರ್ಮ್ ಗೆ ಮರಳಬೇಕಿದೆ.
ಸಂಜು ಸ್ಯಾಮ್ಸನ್ ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ. ಶುಭಮನ್ ಗಿಲ್ ಬದಲಿಗೆ ಅವರಿಗೆ ಆರಂಭಿಕರಾಗಿ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಟಿ20 ವಿಶ್ವಕಪ್ ಕೂಟದಲ್ಲೂ ಅವರೇ ಟೀಂ ಇಂಡಿಯಾ ಓಪನರ್ ಎನ್ನಲಾಗಿತ್ತು.
ಆದರೆ ಸಂಜು ಪದೇ ಪದೇ ವೈಫಲ್ಯಕ್ಕೊಳಗಾಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಹಾಗಿದ್ದರೂ ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲೂ ಸಂಜುಗೆ ಮತ್ತೊಂದು ಅವಕಾಶ ನೀಡಲು ಮ್ಯಾನೇಜ್ ಮೆಂಟ್ ತೀರ್ಮಾನಿಸಿದೆ.
ಆದರೆ ಈ ಪಂದ್ಯದಲ್ಲಿ ಸಂಜು ಫಾರ್ಮ್ ಗೆ ಬರಲೇಬೇಕು. ಯಾಕೆಂದರೆ ಈ ಪಂದ್ಯದ ಬಳಿಕ ಅಂತಿಮ ಪಂದ್ಯ ನಡೆಯುವುದು ತಿರುವನಂತಪುರಂನಲ್ಲಿ. ಕೇರಳದ ಕಣ್ಮಣಿಯಾಗಿರುವ ಸಂಜು ತವರಿನಲ್ಲಿ ಆಡುವುದನ್ನು ನೋಡಲು ಇಲ್ಲಿನ ಪ್ರೇಕ್ಷಕರು ಕಾಯುತ್ತಿದ್ದಾರೆ. ಅನೇಕ ಬಾರಿ ಇದು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಸಂಜು ತವರಿನ ಪ್ರೇಕ್ಷಕರ ಎದುರು ಆಡಬೇಕೆಂದರೆ ಇಂದು ಫಾರ್ಮ್ ಗೆ ಬರಲೇಬೇಕು. ಮತ್ತೆ ವಿಫಲರಾದರೆ ಅವರು ಆಡುವ ಬಳಗದಿಂದ ಹೊರಗುಳಿದರೂ ಅಚ್ಚರಿಯಿಲ್ಲ.