Publish Date: Tue, 27 Jan 2026 (11:16 IST)
Updated Date: Tue, 27 Jan 2026 (11:23 IST)
ವಡೋದರ: ಡಬ್ಲ್ಯುಪಿಎಲ್ ನಲ್ಲಿ ಸತತವಾಗಿ ಎರಡು ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಸುಲಭವಾಗಿ ಫೈನಲ್ ಗೇರುವ ಅವಕಾಶವನ್ನು ಕಳೆದುಕೊಂಡಿದೆ. ನೇರವಾಗಿ ಫೈನಲ್ ಗೇರಲು ಏನು ಮಾಡಬೇಕು ನೋಡಿ.
ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ನಿನ್ನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ ಸಿಬಿ ಸೋತಿದೆ. ಈ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದಿದ್ದರೆ ಆರ್ ಸಿಬಿ ಈಗ ನೇರವಾಗಿ ಫೈನಲ್ ಗೇರುವ ಅವಕಾಶ ಪಡೆಯುತ್ತಿತ್ತು.
ಆದರೆ ಈಗ ನೇರವಾಗಿ ಫೈನಲ್ ಗೇರುವ ಅವಕಾಶ ದುರ್ಗಮವಾಗಿದೆ. ಆದರೆ ಅವಕಾಶವೇ ಇಲ್ಲವೆಂದಲ್ಲ. ಆರ್ ಸಿಬಿಗೆ ಇನ್ನೂ ಒಂದು ಲೀಗ್ ಪಂದ್ಯ ಬಾಕಿಯಿದೆ. ಆ ಪಂದ್ಯವನ್ನು ಗೆದ್ದರೆ ಆರ್ ಸಿಬಿ ನೇರವಾಗಿ ಫೈನಲ್ ಗೇರಲಿದೆ.
ಇದರಿಂದ ಆರ್ ಸಿಬಿ ಎಲಿಮಿನೇಷನ್ ನಿಂದ ಪಾರಾಗಬಹುದು. ಆರ್ ಸಿಬಿಗೆ ಮುಂದಿನ ಪಂದ್ಯ ಯುಪಿ ವಾರಿಯರ್ಸ್ ವಿರುದ್ಧವಿದೆ. ಈ ಪಂದ್ಯ ಜನವರಿ 29 ರಂದು ನಡೆಯಲಿದೆ. ಈ ಪಂದ್ಯ ಗೆದ್ದು ಮತ್ತೆ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಆರ್ ಸಿಬಿಯಿದೆ.