Select Your Language

Notifications

webdunia
webdunia
webdunia
webdunia

IND vs NZ: ನನ್ನ ಒಂದು ಪ್ರಶ್ನೆಗೆ ಇಂದು ಉತ್ತರ ಸಿಕ್ತು: ಪಂದ್ಯದ ಬಳಿಕ ಇಶಾನ್ ಕಿಶನ್ ಹೇಳಿದ್ದೇನು

Ishan Kishan
Photo Credit: X
ರಾಯ್ಪುರ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 7 ವಿಕೆಟ್ ಗಳ ಗೆಲುವು ಸಾಧಿಸಿದ ಬಳಿಕ ಪಂದ್ಯಶ್ರೇಷ್ಠ ಇಶಾನ್ ಕಿಶನ್ ನನ್ನ ಒಂದು ಪ್ರಶ್ನೆಗೆ ಇಂದು ಉತ್ತರ ಸಿಕ್ಕಿತು ಎಂದಿದ್ದಾರೆ.

ಇಶಾನ್ ಕಿಶನ್ ಸುಮಾರು ಎರಡು ವರ್ಷಗಳಿಂದ ಟೀಂ ಇಂಡಿಯಾಗೆ ಆಯ್ಕೆಯಾಗುತ್ತಲೇ ಇರಲಿಲ್ಲ. ಇದೀಗ ಕೊನೆಗೂ ನ್ಯೂಜಿಲೆಂಡ್ ಸರಣಿ ಮತ್ತು ಟಿ20 ವಿಶ್ವಕಪ್ ಗೆ ಸ್ಥಾನ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ರನ್ ಗಳಿಸಿರಲಿಲ್ಲ.

ಆದರೆ ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಕಿಶನ್ 76 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸುವಾಗ ಮಾತನಾಡಿದ ಅವರು ಕಳೆದ ಕೆಲವು ಸಮಯದಿಂದ ನಾನು ಒಂದು ಪ್ರಶ್ನೆ ಕೇಳುತ್ತಲೇ ಇದ್ದೆ. ನನಗೆ ಕಮ್ ಬ್ಯಾಕ್ ಮಾಡಲು ಸಾಧ್ಯವೇ ಎಂದು. ಈವತ್ತು ಆ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿದೆ. ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲೆ ತಂಡಕ್ಕಾಗಿ ರನ್ ಗಳಿಸಬಲ್ಲೆ ಎಂಬ ವಿಶ್ವಾಸ ಮೂಡಿದೆ ಎಂದಿದ್ದಾರೆ.

ನನ್ನನ್ನು ನಾನು ಬೆಂಬಲಿಸುತ್ತಾ ಬಂದೆ. ದೇಶೀಯ ಕ್ರಿಕೆಟ್ ನಲ್ಲಿ ರನ್ ಗಳಿಸುತ್ತಾ ಸಾಗಿದೆ. ಇದೇ ಕಾರಣಕ್ಕೆ ದೇಶೀಯ ಕ್ರಿಕೆಟ್ ನಲ್ಲಿ ಆಡುವುದು ತುಂಬಾ ಮುಖ್ಯವಾಗುತ್ತದೆ. ಅದನ್ನು ಮಾಡುತ್ತಾ ಬಂದೆ. ನನಗೀಗ ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ: ಮೊದಲ ಪಂದ್ಯ ಗೆದ್ದಿರುವ ಭಾರತ ತಂಡದಲ್ಲಿ ಇಂದು ಎರಡು ಬದಲಾವಣೆ