Publish Date: Mon, 19 Jan 2026 (11:42 IST)
Updated Date: Mon, 19 Jan 2026 (11:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೇ ಆಡುವುದನ್ನು ನೋಡಲು ಅಭಿಮಾನಿಗಳು ಇನ್ನು ಐದು ತಿಂಗಳು ಕಾಯಬೇಕು!
ಈಗಷ್ಟೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮುಗಿದಿದೆ. ಕೊಹ್ಲಿ, ರೋಹಿತ್ ಈಗ ಟೆಸ್ಟ್, ಟಿ20 ಮಾದರಿಗೆ ನಿವೃತ್ತಿ ಹೇಳಿದ್ದು ಏಕದಿನ ಸರಣಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳೂ ಈಗ ಏಕದಿನ ಸರಣಿ ಯಾವಾಗ ಬರುತ್ತೋ ಎಂದು ಕಾಯುವಂತಾಗಿದೆ.
ಆದರೆ ಇನ್ನು ಐದು ತಿಂಗಳು ರೋಹಿತ್, ಕೊಹ್ಲಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕಿಳಿಯಲ್ಲ. ಯಾಕೆಂದರೆ ಇನ್ನು, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ನಡೆಯಲಿದೆ. ಅದಾದ ಬಳಿಕ ಟಿ20 ವಿಶ್ವಕಪ್ ನಡೆಯಲಿದೆ. ಇದೆಲ್ಲಾ ಮುಗಿಯುವುದರಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಐಪಿಎಲ್ ಟೂರ್ನಿ ಮುಗಿದ ಬಳಿಕವೂ ಸದ್ಯಕ್ಕೆ ಟೀಂ ಇಂಡಿಯಾಗೆ ಯಾವುದೇ ಏಕದಿನ ಸರಣಿ ನಿಗದಿಯಾಗಿಲ್ಲ. ಹೀಗಾಗಿ ಹೆಚ್ಚು ಕಡಿಮೆ ಐದು ತಿಂಗಳ ಬಳಿಕವಷ್ಟೇ ಇಬ್ಬರನ್ನೂ ಜೊತೆಯಾಗಿ ಮೈದಾನದಲ್ಲಿ ನೋಡುವ ಭಾಗ್ಯ ಅಭಿಮಾನಿಗಳದ್ದು.