Daily Horoscope

Select Your Language

Notifications

webdunia
webdunia
webdunia
webdunia

IND vs NZ: ಟೀಂ ಇಂಡಿಯಾ, ನ್ಯೂಜಿಲೆಂಡ್ ಎರಡನೇ ಟಿ20 ಇಂದು, ಎಷ್ಟು ಗಂಟೆಗೆ ಆರಂಭ ನೋಡಿ

Suryakumar Yadav-Bumrah practice
ರಾಯ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ರಾಯ್ಪುರದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಎಷ್ಟು ಗಂಟೆಗೆ ಆರಂಭವಾಗಲಿದೆ ಇಲ್ಲಿದೆ ಸಂಪೂರ್ಣ ವಿವರ.

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಅದೇ ಉತ್ಸಾಹದಲ್ಲಿ ಎರಡನೇ ಟಿ20 ಪಂದ್ಯವನ್ನು ಆಡಲು ಸೂರ್ಯಕುಮಾರ್ ಯಾದವ್ ಬಳಗ ತಯಾರಾಗಿದೆ. ಮೊದಲ ಪಂದ್ಯ ಗೆದ್ದರೂ ಟೀಂ ಇಂಡಿಯಾದಲ್ಲಿ ಕೆಲವು ಹುಳುಕುಗಳಿವೆ.

ಭಾರತ ತಂಡ  ಇನ್ನೂ ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ತಿಲಕ್ ವರ್ಮಾ ಅನುಪಸ್ಥಿತಿಯಲ್ಲಿ ಶಿವಂ ದುಬೆ, ಸೂರ್ಯಕುಮಾರ್ ಯಾದವ್ ಹೆಚ್ಚು ಜವಾಬ್ಧಾರಿಯುತವಾಗಿ ಆಡಬೇಕಿದೆ. ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಲಯಕ್ಕೆ ಬಂದಂತೆ ತೋರಿದರೂ ಬೇಡದ ಹೊಡೆತಕ್ಕೆ ಕೈ ಹಾಕುವ ಚಾಳಿ ತೋರಿದ್ದರು. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ವಿಫಲರಾದರೂ ಈ ಪಂದ್ಯದಲ್ಲಿ ಉತ್ತಮ ಆಟವಾಡುವ ನಿರೀಕ್ಷೆಯಿದೆ.

ಇನ್ನು, ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಅಕ್ಸರ್ ಪಟೇಲ್ ಈ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹಾಗಿದ್ದಲ್ಲಿ ಕುಲದೀಪ್ ಯಾದವ್ ಗೆ ಅವಕಾಶ ಸಿಗಬಹುದು. ಇನ್ನು ಉಳಿದಂತೆ ತಂಡದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. ಇಂದಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ  ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ