Select Your Language

Notifications

webdunia
webdunia
webdunia
webdunia

ಕನ್ನಡಿಗ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಕಾಲಿಗೆ ಬಿದ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್

Suryakumar Yadav-Raghu
Photo Credit: X
ರಾಯ್ಪುರ: ಬಹಳ ದಿನಗಳ ನಂತರ ಲಯಕ್ಕೆ ಬಂದ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪಂದ್ಯದ ನಂತರ ಕನ್ನಡಿಗ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಟೀಂ ಇಂಡಿಯಾದೊಂದಿಗೆ ಬಹಳ ವರ್ಷಗಳಿಂದಲೂ ರಘು ಇದ್ದಾರೆ. ಅತೀ ವೇಗವಾಗಿ ಥ್ರೋ ಡೌನ್ ಮಾಡುವ ಮೂಲಕ ಬ್ಯಾಟಿಗರಿಗೆ ಎಂಥಾ ಕಠಿಣ ಬಾಲ್ ಗಳನ್ನೂ ಫೇಸ್ ಮಾಡಲು ಅಭ್ಯಾಸ ಮಾಡಿಕೊಡುವುದು ರಘು ಕೆಲಸ. ಅವರ ಕೆಲಸಕ್ಕೆ ವಿರಾಟ್ ಕೊಹ್ಲಿಯಂತಹವರೇ ಕೊಂಡಾಡಿದ್ದಾರೆ.

ಇದೀಗ ನಿನ್ನೆಯ ಪಂದ್ಯದ ಬಳಿಕ ಮೈದಾನ ತೊರೆಯುವ ಮುನ್ನ ಸೂರ್ಯಕುಮಾರ್ ಯಾದವ್ ನೇರವಾಗಿ ರಘು ಕಾಲಿಗೆ ನಮಸ್ಕರಿಸಿ ಧನ್ಯವಾದ ಸಲ್ಲಿಸಿದ್ದಾರೆ. ಸೂರ್ಯಕುಮಾರ್ ನಿನ್ನೆಯ ಪಂದ್ಯದಲ್ಲಿ ಅಜೇಯರಾಗಿ 86 ರನ್ ಗಳಿಸಿದ್ದರು.

ಬಹಳ ದಿನಗಳ ನಂತರ ಸೂರ್ಯ ಬ್ಯಾಟ್ ನಿಂದ ಬಂದ ಅರ್ಧಶತಕವಿದು. ಇದಕ್ಕಾಗಿ ಅರ್ಧಶತಕ ಗಳಿಸಿದ ತಕ್ಷಣ ಪಿಚ್ ಗೆ ನಮಸ್ಕರಿಸಿ ದೇವರಿಗೆ ಧನ್ಯವಾದ ಸಲ್ಲಿಸಿದ್ದರು. ಇದಲ್ಲದೆ, ತಮಗೆ ಕಠಿಣ ಅಭ್ಯಾಸ ಮಾಢಲು ನೆರವಾದ ರಘು ಮೇಲೆ ಅಭಿಮಾನದಿಂದ ಸೂರ್ಯ ನಮಸ್ಕರಿಸಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯಂತೆ ಸ್ಮೃತಿ ಮಂಧಾನಗೂ ಬೆಂಗಳೂರಿನಲ್ಲಿ ಇದೊಂದು ತುಂಬಾ ಇಷ್ಟವಂತೆ