Publish Date: Tue, 02 May 2023 (07:20 IST)
Updated Date: Tue, 02 May 2023 (07:33 IST)
ನವದೆಹಲಿ: ಗಾಯದಿಂದಾಗಿ ಸದ್ಯಕ್ಕೆ ಟೀಂ ಇಂಡಿಯಾದಿಂದ ದೂರವಿರುವ ಕ್ರಿಕೆಟಿಗ ರಿಷಬ್ ಪಂತ್, ಟ್ವಿಟರ್ ನಲ್ಲಿ ಮಾಡಿದ ಲೈಕ್ ಒಂದು ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.
ರೋಹಿತ್ ಶರ್ಮಾ ಹುಟ್ಟುಹಬ್ಬ ನಿಮಿತ್ತ ಅಭಿಮಾನಿಯೊಬ್ಬರು ಗ್ರೇಟ್ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಈ ರೀತಿ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವೆ ಹೋಲಿಕೆ ಮಾಡುವುದು ಸಹಜ.
ಆದರೆ ಇದಕ್ಕೆ ಕ್ರಿಕೆಟಿಗರ ರಿಷಬ್ ಪಂತ್ ಲೈಕ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ರಿಷಬ್ ಪಂತ್ ಗೆ ರೋಹಿತ್ ಜೊತೆ ಉತ್ತಮ ಬಾಂಧವ್ಯವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೊಹ್ಲಿಯನ್ನು ತೆಗಳಿರುವ ಪೋಸ್ಟ್ ನ್ನು ಲೈಕ್ ಮಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.