Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಗುಜರಾತ್ ಗೆ ಮತ್ತೊಂದು ಗೆಲುವಿನ ನಿರೀಕ್ಷೆ

ಐಪಿಎಲ್ 2023: ಗುಜರಾತ್ ಗೆ ಮತ್ತೊಂದು ಗೆಲುವಿನ ನಿರೀಕ್ಷೆ
ಅಹಮ್ಮದಾಬಾದ್ , ಮಂಗಳವಾರ, 2 ಮೇ 2023 (06:50 IST)
ಅಹಮ್ಮದಾಬಾದ್: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ.

ಗುಜರಾತ್ ಟೈಟನ್ಸ್ ಈವರೆಗೆ ಆಡಿದ 8 ಪಂದ್ಯಗಳ ಪೈಕಿ 6 ರನ್ನು ಗೆದ್ದುಕೊಂಡು ಈ ಕೂಟದ ಪ್ರಬಲ ತಂಡವೆನಿಸಿಕೊಂಡಿದೆ. ಸದ್ಯಕ್ಕೆ ನಂ.1 ಸ್ಥಾನದಲ್ಲಿರುವ ಗುಜರಾತ್ ಇಂದು ದುರ್ಬಲ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.

ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಕೂಟ ಅತ್ಯಂತ ಹೀನಾಯವಾಗಿದೆ. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 2 ಗೆಲುವು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ ಪಡೆ ಇಂದು ಪ್ರಬಲ ಗುಜರಾತ್ ವಿರುದ್ಧ ಗೆಲ್ಲಲು ಶತಪ್ರಯತ್ನ ಮಾಡಬೇಕಾದೀತು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಲಕ್ನೋ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ