Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು?

ಐಪಿಎಲ್ 2023: ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು?
ಲಕ್ನೋ , ಸೋಮವಾರ, 1 ಮೇ 2023 (06:40 IST)
ಲಕ್ನೋ: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಪಡೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಪಂದ್ಯವಾಡಲಿದೆ.

ಕಳೆದ ಪಂದ್ಯದಲ್ಲಿ ಲಕ್ನೋ ಕೊನೆಯ ಓವರ್ ನಲ್ಲಿ ರೋಚಕವಾಗಿ ಪಂದ್ಯ ಗೆದ್ದಿದ್ದನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಈ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್ ಸಿಬಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ. ಆರ್ ಸಿಬಿ ಇದುವರೆಗೆ ಆಡಿದ 8 ಪಂದ್ಯಗಳಿಂದ 4 ಗೆಲುವು ಸಂಪಾದಿಸಿದೆ. ಇದೀಗ ಟಾಪ್ 5 ರೊಳಗಿರಲು ಗೆಲುವು ಅನಿವಾರ್ಯವಾಗಿದೆ.

ಅತ್ತ ಲಕ್ನೋ ತಂಡ 8 ಪಂದ್ಯಗಳಿಂದ 5 ಗೆಲುವು ಕಂಡುಕೊಂಡಿದೆ. ಆರ್ ಸಿಬಿಗೆ ಹೋಲಿಸಿದರೆ ಲಕ್ನೋ ಇದುವರೆಗೆ ಸುಧಾರಿತ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಆದರೆ ನಾಯಕ ಕೆಎಲ್ ರಾಹುಲ್ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಕ್ಯಾಪ್ಟನ್ ರೋಹಿತ್ ಗೆ ಗೆಲುವಿನ ಉಡುಗೊರೆ