Publish Date: Sun, 30 Apr 2023 (20:57 IST)
Updated Date: Sun, 30 Apr 2023 (21:01 IST)
ಚೆನ್ನೈ: ಐಪಿಎಲ್ 2023 ರ ಇಂದಿನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಕಾನ್ವೇ ಅಜೇಯ 92 ರನ್ ಗಳಿಸಿದರು.
ಈ ಮೊತ್ತವನ್ನು ಬೆನ್ನತ್ತಿದ ಪಂಜಾಬ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿತು. ಪಂಜಾಬ್ ಗೆಲುವಿನ ರೂವಾರಿಯಾಗಿದ್ದ ಸಿಕಂದರ್ ರಾಜಾ. ಅವರು ಗಳಿಸಿದ್ದು ಕೇವಲ 13 ರನ್ ಗಳಾದರೂ ಕೊನೆಯ ಎಸೆತದಲ್ಲಿ ಮೂರು ರನ್ ಬೇಕಾಗಿದ್ದಾಗ ಮೂರು ರನ್ ಓಡಿ ಗಳಿಸದೇ ಹೋಗಿದ್ದರೆ ಬಹುಶಃ ಪಂಜಾಬ್ ಗೆ ಸೋಲಾಗುತ್ತಿತ್ತು. ಇದರೊಂದಿಗೆ ಚೆನ್ನೈ ಸತತ ಎರಡನೇ ಸೋಲು ಅನುಭವಿಸಿತು.