Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಪಂಜಾಬ್ ವಿರುದ್ಧ ಮತ್ತೆ ಗೆಲ್ಲುವ ತವಕದಲ್ಲಿ ಸಿಎಸ್ ಕೆ

ಐಪಿಎಲ್ 2023: ಪಂಜಾಬ್ ವಿರುದ್ಧ ಮತ್ತೆ ಗೆಲ್ಲುವ ತವಕದಲ್ಲಿ ಸಿಎಸ್ ಕೆ
ಚೆನ್ನೈ , ಭಾನುವಾರ, 30 ಏಪ್ರಿಲ್ 2023 (06:50 IST)
ಚೆನ್ನೈ: ಐಪಿಎಲ್ 2023 ರಲ್ಲಿ ಪ್ರಬಲ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯವಾಡಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ತಾನಾಡಿದ 8 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್  ವಿರುದ್ಧ ಅಚ್ಚರಿಯ ಸೋಲು ಅನುಭವಿಸಿತ್ತು. ಆದರೆ ಧೋನಿ ಪಡೆ ಪ್ರಬಲವಾಗಿದ್ದು ಇಂದು ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ.

ಅತ್ತ ಶಿಖರ್ ಧವನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇದುವರೆಗೆ ತಾನಾಡಿದ 7 ಪಂದ್ಯಗಳ ಪೈಕಿ ಪಂಜಾಬ್ 4 ಗೆಲುವು ಸಿಕ್ಕಿದೆ. ಇಂದೂ ಚೆನ್ನೈ ಮೇಲೆ ಸವಾರಿ ಮಾಡುವ ವಿಶ್ವಾಸದಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಡೆಲ್ಲಿ ವಿರುದ್ಧ ಹೈದರಾಬಾದ್ ಗೆ ರೋಚಕ ಜಯ