Publish Date: Fri, 28 Apr 2023 (06:20 IST)
Updated Date: Fri, 28 Apr 2023 (06:49 IST)
ಜೈಪುರ: ಐಪಿಎಲ್ 2023 ರಲ್ಲಿ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಸೋಲಿನ ರುಚಿ ತೋರಿಸಿದೆ. ಸಿಎಸ್ ಕೆ ವಿರುದ್ಧ ರಾಜಸ್ಥಾನ್ 32 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 77, ಧ್ರುವ ಜ್ಯುರೆಲ್ 34, ದೇವದತ್ತ ಪಡಿಕ್ಕಲ್ 27 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಸಿಎಸ್ ಕೆಗೆ ಋತುರಾಜ್ ಗಾಯಕ್ ವಾಡ್ 47 ರನ್ ಗಳಿಸಿ ಆಧಾರವಾದರು. ಆದರೆ ಇನ್ನೊಬ್ಬ ಆರಂಭಿಕರಿಂದ ಸಾಥ್ ಸಿಗಲಿಲ್ಲ. ಶಿವಂ ದುಬೆ 52, ಮೊಯಿನ್ ಅಲಿ, ರವೀಂದ್ರ ಜಡೇಜಾ 23 ರನ್ ಗಳಿಸಿದರು. ಇದರಿಂದಾಗಿ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಜಸ್ಥಾನ್ ಪರ ಆಡಂ ಜಂಪಾ 3, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಬಳಿಸಿದರು.