Publish Date: Thu, 27 Apr 2023 (06:10 IST)
Updated Date: Thu, 27 Apr 2023 (06:39 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.ಜೇಸನ್ ರಾಯ್ 56, ವೆಂಕಟೇಶ್ ಅಯ್ಯರ್ 31, ನಿತೀಶ್ ರಾಣಾ 48 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಆರ್ ಸಿಬಿ ಆರಂಭ ಉತ್ತಮವಾಗಿತ್ತು. ಆರಂಭದ 2 ಓವರ್ ಗಳಲ್ಲೇ 30 ರನ್ ಹರಿದುಬಂತು. ಆದರೆ ಆಗ ಕೆಕೆಆರ್ ನಾಯಕ ನಿತೀಶ್ ರಾಣಾ ಸ್ಪಿನ್ ಅಸ್ತ್ರ ಬಳಸಿದರು. ಆರೆಂಜ್ ಕ್ಯಾಪ್ ಹೋಲ್ಡರ್ ಫಾ ಡು ಪ್ಲೆಸಿಸ್ 17 ರನ್ ಗಳಿಸಿ ಮೊದಲನೆಯವರಾಗಿ ಸುಯಾಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಹೋರಾಟ 54 ರನ್ ಗಳಿಸಿದರು. ಬಳಿಕ ಮೊಹಿಪಾಲ್ ಲೋಮ್ರೋರ್ 34, ದಿನೇಶ್ ಕಾರ್ತಿಕ್ 22 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ತಕ್ಕ ಸಾಥ್ ಸಿಗಲಿಲ್ಲ. ಸ್ಪಿನ್ನರ್ ವರುಣ್ ಚಕ್ರವರ್ತಿ ಪ್ರಮುಖ 3 ವಿಕೆಟ್ ಕಬಳಿಸಿದರೆ ಸುಯಾಶ್ ಶರ್ಮಾ, ಆಂಡ್ರೆ ರಸೆಲ್ ತಲಾ 2 ವಿಕೆಟ್ ಕಬಳಿಸಿದರು. ಅಂತಿಮಾಗಿ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೋಲ್ಕೊತ್ತಾ ಸೋಲಿನ ಸರಪಳಿಯಿಂದ ಹೊರಬಂತು.