Publish Date: Mon, 01 May 2023 (08:06 IST)
Updated Date: Mon, 01 May 2023 (08:08 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಸಿಕ್ಕಿದೆ. ವೇಗಿ ಉಮೇಶ್ ಯಾದವ್ ಗಾಯಗೊಂಡಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಮೇ ಕೊನೆಯ ವಾರದಲ್ಲಿ ಪ್ರಯಾಣ ಬೆಳೆಸಲಿದೆ.
ಈ ತಂಡದಲ್ಲಿ ಉಮೇಶ್ ಯಾದವ್ ಕೂಡಾ ಸ್ಥಾನ ಪಡೆದಿದ್ದಾರೆ. ಇದೀಗ ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುತ್ತಿರುವ ಉಮೇಶ್ ಯಾದವ್ ಗಾಯಗೊಂಡಿದ್ದು ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಅವರು ಬೇಗನೇ ಚೇತರಿಸಿಕೊಳ್ಳದೇ ಹೋದರೆ ಡಬ್ಲ್ಯುಟಿಸಿ ಫೈನಲ್ ಮಿಸ್ ಮಾಡಿಕೊಳ್ಳುವುದು ಖಚಿತ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ನ ಪರಿಸ್ಥಿತಿಯಲ್ಲಿ ಹಿರಿಯ ವೇಗಿ ಉಮೇಶ್ ಯಾದವ್ ಉಪಸ್ಥಿತಿ ತಂಡಕ್ಕೆ ಮುಖ್ಯವಾಗಿದೆ.