Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಲಕ್ನೋ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ

ಐಪಿಎಲ್ 2023: ಲಕ್ನೋ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ
ಲಕ್ನೋ , ಮಂಗಳವಾರ, 2 ಮೇ 2023 (06:40 IST)
ಲಕ್ನೋ: ಐಪಿಎಲ್ 2023 ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.

ಈ ಆಟದಲ್ಲಿ ಬೌಲರ್ ಗಳದ್ದೇ ಮೇಲುಗೈ. ಬ್ಯಾಟಿಗರು ರನ್ ಗಳಿಸಲು ಪರದಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಫಾ ಡು ಪ್ಲೆಸಿಸ್ 44 ರನ್, ವಿರಾಟ್ ಕೊಹ್ಲಿ 31 ರನ್ ಗಳಿಸಿದರು.

ಈ ಮೊತ್ತವನ್ನು ಲಕ್ನೋ ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಲಕ್ನೋ ಬ್ಯಾಟಿಗರು ಸಂಪೂರ್ಣ ಪರದಾಡಿದರು. ಅಂತಿಮವಾಗಿ ಲಕ್ನೋ 19.5 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಟಿಸಿ ಫೈನಲ್ ಗೆ ಮೊದಲು ಆಘಾತ: ವೇಗಿ ಉಮೇಶ್ ಯಾದವ್ ಗೆ ಗಾಯ