Select Your Language

Notifications

webdunia
webdunia
webdunia
webdunia

ಆರ್ ಸಿಬಿ, ವಿರಾಟ್ ಕೊಹ್ಲಿ ನನ್ನ ಫೇವರಿಟ್ ಎಂದ ರಶ್ಮಿಕಾ ಮಂದಣ್ಣ

ಆರ್ ಸಿಬಿ, ವಿರಾಟ್ ಕೊಹ್ಲಿ ನನ್ನ ಫೇವರಿಟ್ ಎಂದ ರಶ್ಮಿಕಾ ಮಂದಣ್ಣ
ಹೈದರಾಬಾದ್ , ಸೋಮವಾರ, 1 ಮೇ 2023 (17:24 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಮಿಂಚುತ್ತಿದ್ದರೂ ಕನ್ನಡ ಮೂಲದವರೇ. ಅವರು ಕನ್ನಡದ ವಿಚಾರಕ್ಕೆ ಹಲವು ಬಾರಿ ಟ್ರೋಲ್ ಆಗಿರಬಹುದು. ಆದರೆ ಕರ್ನಾಟಕವನ್ನು ಮರೆತಿಲ್ಲ.

ಸ್ಟಾರ್ ಸ್ಪೋರ್ಟ್ಸ್ ರಶ್ಮಿಕಾರ ಲೇಟೆಸ್ಟ್ ವಿಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ರಶ್ಮಿಕಾ ಆರ್ ಸಿಬಿ ನನ್ನ ಫೇವರಿಟ್ ತಂಡ, ವಿರಾಟ್ ಕೊಹ್ಲಿ ನನ್ನ ಫೇವರಿಟ್ ಕ್ರಿಕೆಟಿಗ ಎಂದಿದ್ದಾರೆ.

‘ನಾನು ಬೆಂಗಳೂರಿನಿಂದ ಬಂದವಳು, ನಾನು ಕರ್ನಾಟಕದವಳು. ಈ ಸಲ ಕಪ್ ನಮ್ದೇ ಎನ್ನುವುದು ನಮ್ಮ ಫೇವರಿಟ್ ಸ್ಲೋಗನ್. ಈ ಸಲ ಆರ್ ಸಿಬಿ ಚೆನ್ನಾಗಿ ಆಡಿ ಕಪ್ ಗೆಲ್ಲುತ್ತೆ ಎನ್ನುವ ವಿಶ್ವಾಸವಿದೆ’ ಎಂದಿರುವ ರಶ್ಮಿಕಾ, ಕೊಹ್ಲಿ ತಮ್ಮ ಮೆಚ್ಚಿನ ಆಟಗಾರ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಚುನಾವಣಾ ಪ್ರಚಾರಕ್ಕೆ ಮತ್ತೆ ಅಡ್ಡಿ