ಹೈದರಾಬಾದ್: ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೆಲವು ದಿನಗಳಿಂದ ತಾನು ಸೋಷಿಯಲ್ ಮೀಡಿಯಾದಿಂದ ದೂರವಿದ್ದಿದ್ದು ಯಾಕೆ ಎಂದು ಬಹಿರಂಗಪಡಿಸಿದ್ದಾರೆ.
ರಶ್ಮಿಕಾ ಈಗ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಸೋಷಿಯಲ್ ಮೀಡಿಯಾದಿಂದ ಕಿರು ಬ್ರೇಕ್ ಪಡೆದಿದ್ದರು.
ಇದಕ್ಕೆ ಕಾರಣ ತಮ್ಮ ಮುಂಬರುವ ರೈನ್ ಬೋ ಸಿನಿಮಾದ ಶೂಟಿಂಗ್ ಎಂದಿದ್ದಾರೆ. ನೆಟ್ ವರ್ಕ್ ಇಲ್ಲದ ಜಾಗದಲ್ಲಿ ಶೂಟಿಂಗ್ ನಡೆಯುತ್ತಿದ್ದ ಕಾರಣ ಸೋಷಿಯಲ್ ಮೀಡಿಯಾದಿಂದ ದೂರವಿದ್ದಿದ್ದಾಗಿ ಹೇಳಿದ್ದಾರೆ.