Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಗೆ ದುಬೈಗೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರ ತಲೆ ಹೀಗಾಗಿರೋದು ನಿಜಾನಾ

Suryakumar Yadav

Krishnaveni K

ದುಬೈ , ಶನಿವಾರ, 6 ಸೆಪ್ಟಂಬರ್ 2025 (09:09 IST)
Photo Credit: X

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರ ತಲೆ ಕೂದಲು ಹೀಗಾಗಿರೋದು ನಿಜಾನಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳ ಅಸಲಿಯತ್ತೇನು ನೋಡಿ.

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಕ್ರಿಕೆಟಿಗರು ಈಗಾಗಲೇ ಅರಬ್ ನಾಡಿಗೆ ಬಂದಿಳಿದಿದ್ದಾರೆ. ನಿನ್ನೆಯಿಂದ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಆದರೆ ಇದರ ನಡುವೆ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಅವರ ವಿಚಿತ್ರ ಹೇರ್ ಕಲರ್ ಹಾಕಿರುವ ಫೋಟೋಗಳು ವೈರಲ್ ಆಗಿವೆ.

ಈ ಪೈಕಿ ಹಾರ್ದಿಕ್ ಪಾಂಡ್ಯ ತಮ್ಮ ತಲೆಕೂದಲಿಗೆ ಸಿಲ್ವರ್ ಕಲರ್ ಡೈ ಮಾಡಿಸಿಕೊಂಡಿರುವುದು ನಿಜ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಇದರ ನಡುವೆ ಸೂರ್ಯ, ಗಿಲ್ ಫೋಟೋಗಳೂ ವೈರಲ್ ಆಗಿದ್ದವು. ಸೂರ್ಯಕುಮಾರ್ ಯಾದವ್ ಪಿಂಕ್ ಕಲರ್ ಹೇರ್ ಕಲರ್ ಮಾಡಿಸಿದಂತೆ ಮತ್ತು ಗಿಲ್ ಬ್ರೌನ್ ಕಲರ್ ಹೇರ್ ಮಾಡಿಸಿದಂತೆ ಫೋಟೋಗಳು ವೈರಲ್ ಆಗಿವೆ.

ಆದರೆ ಇದು ನಿಜವಲ್ಲ. ಅಸಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಗಿಲ್ ದುಬೈಗೆ ಹಾರುವ ಮುನ್ನ ಫೇಮಸ್ ಹೇರ್ ಸ್ಟೈಲಿಶ್ ಬಳಿ ಮುಂಬೈನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದು ನಿಜ. ಆದರೆ ಕಲರ್ ಮಾಡಿಸಿಕೊಂಡಿರಲಿಲ್ಲ. ಯಾರೋ ಈ ರೀತಿ ಎಡಿಟ್ ಮಾಡಿ ಫೇಕ್ ಫೋಟೋಗಳನ್ನು ಹರಿಯಬಿಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಮ್ಯಾಚ್ ನೋಡುವ ಟಿಕೆಟ್ ದರದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು