ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಗಾಯಕಿ, ನಟಿ ಜಾಸ್ಮಿನ್ ವಾಲಿಯಾ ಅವರು ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ, ಅವರಿಬ್ಬರು ಈಗ ದೂರವಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅವರಿಬ್ಬರ ನಡೆ.
ಹೌದು, ಈ ಪ್ರಣಯ ಪಕ್ಷಿಗಳು ಮುನಿಸಿಕೊಂಡಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದ ಪಾಂಡ್ಯ ಅವರು ನಟಿ ಜಾಸ್ಮಿನ್‌ಗೆ ಹತ್ತಿರವಾಗಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ, ಈಗ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ.
ನತಾಶಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಪಾಂಡ್ಯ ವಿಚ್ಛೇದನ ಪಡೆದರು. ಆದರೆ ತಮ್ಮ ಮಗ ಅಗಸ್ತ್ಯನನ್ನು ಒಟ್ಟಿಗೆ ಬೆಳೆಸುವುದನ್ನು ಮುಂದುವರಿಸುತ್ತಾರೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ವಾಲಿಯಾ ಪಾಂಡ್ಯ ಅವರನ್ನು ಬೆಂಬಲಿಸಲು ಬಂದ ನಂತರ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಪ್ರಾರಂಭವಾದವು.
ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳ ಸಮಯದಲ್ಲಿ ಜಾಸ್ಮಿನ್ ಅವರು ಪಾಂಡ್ಯ ಅವರನ್ನು ಬೆಂಬಲಿಸುತ್ತಿರುವುದು ಕಂಡುಬಂದಿತ್ತು, ಇದು ಡೇಟಿಂಗ್ ವದಂತಿಗಳಿಗೆ ಕಾರಣವಾಯಿತು. ಆದರೆ, ಪಾಂಡ್ಯ ಅವರು ವಾಲಿಯಾ ಅವರ ಫೋಟೋಗಳಿಗೆ ನೀಡಿದ ಎಲ್ಲಾ ಲೈಕ್‌ಗಳನ್ನು ಸಹ ತೆಗೆದುಹಾಕಿದ್ದು, ಅವರಿಬ್ಬರು ದೂರವಾಗಿರುವುದಕ್ಕೆ ಪುಷ್ಟಿ ನೀಡಿದೆ.