Select Your Language

Notifications

webdunia
webdunia
webdunia
webdunia

Digvesh Rathi: ಆರ್ ಸಿಬಿ ಕೆಡವಲು ಕಳ್ಳ ದಾರಿ ಹಿಡಿದು ಹೊಡೆಸಿಕೊಂಡ ದಿಗ್ವೇಶ್ ರಾಠಿ: ರಿಷಭ್ ಪಂತ್ ರಿಯಾಕ್ಷನ್ ವಿಡಿಯೋ ನೋಡಿ

Digvesh Rathi

Krishnaveni K

ಲಕ್ನೋ , ಬುಧವಾರ, 28 ಮೇ 2025 (09:31 IST)
Photo Credit: X
ಲಕ್ನೋ: ಐಪಿಎಲ್ 2025 ರ ನಿನ್ನೆಯ ಆರ್ ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಬೌಲರ್ ದಿಗ್ವೇಶ್ ರಾಠಿ ಕಳ್ಳ ದಾರಿ ಹಿಡಿಯಲು ಹೋಗಿ ತಾವೇ ಹೊಡೆಸಿಕೊಂಡಿದ್ದಾರೆ. ದಿಗ್ವೇಶ್ ವರ್ತನೆಗೆ ಲಕ್ನೋ ನಾಯಕ ರಿಷಭ್ ಪಂತ್ ತಲೆ ತಗ್ಗಿಸುವಂತಾಗಿದೆ.

ಕೊನೆಯ ಎರಡು ಓವರ್ ರೋಚಕವಾಗಿತ್ತು. ಆರ್ ಸಿಬಿ ಗೆಲುವಿನ ರನ್ ಗೂ ಬಾಲ್ ಗೂ 10 ಹೆಜ್ಜೆಯ ದೂರವಿತ್ತು. 17 ನೇ ಓವರ್ ಬಾಲ್ ಮಾಡಲು ಬಂದಿದ್ದು ದಿಗ್ವೇಶ್ ರಾಠಿ. ಆರನೇ ಎಸೆತವನ್ನು ದಿಗ್ವೇಶ್ ಬಾಲ್ ಮಾಡಲು ಹೊರಟಿದ್ದರು. ಕ್ರೀಸ್ ಕೂಡಾ ದಾಟಿದ್ದರು. ನಾನ್ ಸ್ಟ್ರೈಕರ್ ಎಂಡ್ ಬಿಟ್ಟಿದ್ದ ಜಿತೇಶ್ ಶರ್ಮಾ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿ ಜಿತೇಶ್ ಬಾಲ್ ಬ್ಯಾಟರ್ ಗೆ ಎಸೆಯದೇ ಬೇಲ್ ಎಗರಿಸಿ ರನೌಟ್ ಗೆ ಅಪೀಲ್ ಮಾಡಿದರು. ಅಂಪಾಯರ್ ಕೂಡಾ ಥರ್ಡ್ ಅಂಪಾಯರ್ ಗೆ ರಿವ್ಯೂ ನೀಡಿದರು.

ಈ ವೇಳೆ ದಿಗ್ವೇಶ್ ಕೂಡಾ ಕ್ರೀಸ್ ದಾಟಿದ ಬಳಿಕ ಬೇಲ್ ಎಗರಿಸಿದ್ದರು ಎನ್ನುವುದು ಪಕ್ಕಾ ಆಗಿ ಜಿತೇಶ್ ನಾಟೌಟ್ ಆಗಿ ಉಳಿದುಕೊಂಡರು. ದಿಗ್ವೇಶ್ ಕಳ್ಳ ದಾರಿ ಹಿಡಿದಿದ್ದಕ್ಕೆ ಸ್ವತಃ ರಿಷಭ್ ಪಂತ್ ಬೇಸರಗೊಂಡರು. ಬಳಿಕ ಸ್ವತಃ ಜಿತೇಶ್ ಅವರನ್ನು ಅಪ್ಪಿ ಸಮಾಧಾನಿಸಿದರು.  ಈ ವಿಡಿಯೋ ಈಗ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

RCB vs LSG match: ಕುಣಿದು ಕುಣಿದು ಬಂದ ಕೊಹ್ಲಿ: ಫನ್ನಿ ವಿಡಿಯೋ ಇಲ್ಲಿದೆ