ಬೆಂಗಳೂರು: ಆರ್‌ಸಿಬಿ ವಿರುದ್ಧ ಅಬ್ಬರದ ಶತಕ ಭಾರಿಸಿ ಆಜೇಯಯವಾಗಿ ಉಳಿಯುವ ಮೂಲಕ ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್ ಶಾಕಿಂಗ್ ಪ್ರದರ್ಶನ ನೀಡಿದ್ದಾರೆ.
ಐಪಿಎಲ್ 2025ರ ದುಬಾರಿ ಆಟಗಾರನಾಗಿರುವ ರಿಷಭ್ ಪಂತ್ ಈ ಹಿಂದಿನ ಪಂದ್ಯಾಟದಲ್ಲಿ ತಮ್ಮ ಕಳಪೆ ಪ್ರದರ್ಶನದಿಂದಲೇ ಗುರುತಿಸಿಕೊಂಡಿದ್ದರು. ಇದೀಗ ಆರ್‌ಸಿಬಿ ವಿರುದ್ಧ ರಿಷಬ್ ಪಂತ್ ಬ್ಯಾಟಿಂಗ್ ಪ್ರದರ್ಶನ ಎಲ್ಲ ಟೀಕೆಗಳಿಗೆ ಉತ್ತರ ನೀಡಿದೆ.
ಇಂದು ನಡೆಯುತ್ತಿರುವ ಐಪಿಎಲ್ 2025ರ ಪಂದ್ಯಾಟದಲ್ಲಿ ಆರ್‌ಸಿವಿ ಹಾಗೂ ಲಕ್ನೋ ಮುಖಾಮುಖಿಯಾಗಿದೆ.
ಟಾಸ್ ಗೆದ್ದ ಆರ್‌ಸಿಬಿ, ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ ವಿಕೆಟ್‌ಗಳ ನಷ್ಟಕ್ಕೆ 227ರನ್ ಗಳಿಸಿತು.
ಮಾರ್ಷ್ 37ಎಸೆತಗಳಲ್ಲಿ 67ರನ್, ಮ್ಯಾಥ್ಯೂ 12 ಎಸೆತಗಳಲ್ಲಿ 14ರನ್, ರಿಷಬ್ ಪಂತ್ 61 ಎಸೆತಗಳಲ್ಲಿ 118 ರನ್, ಪೂರನ್ 10ಎಸೆತಗಳಲ್ಲಿ 13ರನ್, ಸಮಾದ್ 1 ಎಸೆತಗಳಲ್ಲಿ 1 ರನ್ ಗಳಿಸಿದರು.
ಈ ಮೂಲಕ ಆರ್‌ಸಿಬಿ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದೆ.